More

    ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಿಸಿ

    ಹುಕ್ಕೇರಿ: ಸ್ಥಳೀಯ ಕೋಟೆ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಶೈಕ್ಷಣಿಕ ಸಂಘಟನೆಗಳು ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ ಅವರ ಆಶ್ರಯದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.

    ಬಿಇಒ ಮೋಹನ ದಂಡಿನ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ. ನಾಯಿಕ ಅವರು ಸಸಿನೆಟ್ಟು ಮಾತನಾಡಿ, ಪರಿಸರ ಮಾಲಿನ್ಯದಿಂದ ನಮ್ಮ ಬದುಕು ಅಸಹನೀಯವಾಗಿದೆ. ಪ್ರತಿಯೊಬ್ಬರೂ ಗಿಡಮರ ಬೆಳೆಸಲು ಮುಂದಾಗಬೇಕು ಎಂದರು. ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಶ್ರೀಶೈಲ ಹಿರೇಮಠ, ಉದಯ ಹುಕ್ಕೇರಿ, ಬಿ.ಎನ್. ದೇಶಪಾಂಡೆ, ಎನ್.ಬಿ.ಗುಡಸಿ, ಎಂ.ಬಿ.ನಾಯಿಕ ಇತರರು ಇದ್ದರು.

    ಚಿಕ್ಕೋಡಿ ವರದಿ: ಮನುಕುಲ, ಜೀವ ಸಂಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆ ಅಗತ್ಯ ಎಂದು ಯುವ ಧುರೀಣ ವಿಶ್ವನಾಥ ಕಾಮಗೌಡ ಹೇಳಿದ್ದಾರೆ. ಪಟ್ಟಣದ ಡಂಬಳ ಬಡಾವಣೆ ವ್ಯಾಪ್ತಿಯ ನೂತನ ಸನದಿ ಪ್ಲಾಟ್‌ನಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಮಾತನಾಡಿದರು. ಹೂವಪ್ಪ ಗಾವಡೆ, ನಾಯಕ್, ಶಿಕ್ಷಕ ಹಿರೇಮಠ, ಅನಿಲ ಸನದಿ, ಎಸ್.ಬಿ.ಮುಲ್ಲಾ, ಸಾಬಿರ್ ಕಲಾರಕೊಪ್ಪ ಇತರರು ಉಪಸ್ಥಿತರಿದ್ದರು.

    ಅಳಗವಾಡಿ ವರದಿ: ಪರಿಸರ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಪಿಡಿಒ ಎಸ್.ಟಿ.ತಿಗಡಿ ಹೇಳಿದ್ದಾರೆ. ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ತಾಪಂ ಸದಸ್ಯ ಯಲ್ಲಪ್ಪ ಶಿರಗೂರೆ, ಮಹಾವೀರ ಹೆಗಡೆ, ಶ್ರೀಶೈಲ ಠಕ್ಕಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts