More

    ಉತ್ತಮ ಆರೋಗ್ಯಕ್ಕೆ ಸಮತೋಲನ ಅಹಾರ ಸೇವಿಸಿ

    ಹಗರಿಬೊಮ್ಮನಹಳ್ಳಿ: ಸ್ಪರ್ಧಾತ್ಮಕ ಯುಗದ ಜೀವನ ಶೈಲಿಯಲ್ಲಿ ನಿಗಧಿತ ವೇಳೆಗೆ ಆಹಾರ ಸ್ವೀಕರಿಸುವುದು ಅಸಾಧ್ಯವಾಗಿದೆ ಹಾಗಾಗೀ ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿಡಿಪಿಒ ಅಧಿಕಾರಿ ಸುದೀಪ್ ಉಂಕಿ ಹೇಳಿದರು.

    ಇದನ್ನೂ ಓದಿ: ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮುಖ್ಯ

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಫೋಷಣ್ ಅಭಿಯಾನ ಯೋಜನೆಯಡಿ ರಾಷ್ಟ್ರೀಯ ಪೌಷ್ಠಿಕ ಅಹಾರ ದಿನಾಚರಣೆಯಲ್ಲಿ ಮಾತನಾಡಿದರು.

    ಚಿಕ್ಕ ವಯಸ್ಸಿನಲ್ಲಿ ಸಕ್ಕರೆ ಖಾಯಲೆ ಮತ್ತು ಹೃದ್ರೋಗ ಸಮಸ್ಯೆಗಳು ಹೆಚ್ಚಾಗುತ್ತಿರುವುದಕ್ಕೆ ಒತ್ತಡದ ಜೀವನಶೈಲಿ ಪ್ರಮುಖ ಕಾರಣ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್‌ಫುಡ್, ಜಂಕ್‌ಫುಡ್ ಮೊರೆ ಹೋಗಿದ್ದಾರೆ. ಪೂರ್ವಜರ ಅಹಾರ ಪದ್ಧತಿಯನ್ನು ಮನೆಗಳಲ್ಲಿ ಬಳಸುವುದನ್ನು ಮರೆತಿದ್ದಾರೆ.

    ವಿಟಮಿನ್, ಪ್ರೋಟಿನಗೆ ಜ್ಯೂಸ್‌ನ ಹಿಂದೆ ಬಿದ್ದಿರುವುದು ಶೋಚನೀಯ. ಮನೆಯಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ, ಸೊಪ್ಪು, ತರಕಾರಿಗಳನ್ನು ಬಳಸುವುದರಿಂದಲೇ ಉತ್ತಮ ಆರೋಗ್ಯ ದೊರೆಯಲಿದೆ.

    ವಯಸ್ಸಿನ ಅಂತರವಿಲ್ಲದೇ ಪ್ರತಿಯೊಬ್ಬರು ಸಮತೋಲನ ಅಹಾರ ಪದ್ದತಿಯನ್ನು ಅಳವಡಿಸಿಕೊಂಡರೇ ಮಾತ್ರ ಆರೋಗ್ಯ ಭಾಗ್ಯ ಲಭಿಸಲಿದೆ ಇದನ್ಎಂನು ಅರಿತು ನಮ್ಮಗಳ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts