More

    ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಯಲ್ಲಿ ಗೋಲ್ಮಾಲ್

    ಹಾಸನ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮಾರಾಟ ಮಾಡಲು ಆರಂಭಿಸಿದ್ದ ನೋಂದಣಿ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿ ನಗರದ ಎಪಿಎಂಸಿ ಕೇಂದ್ರದ ಎದುರು ಶುಕ್ರವಾರ ತೆಂಗು ಬೆಳೆಗಾರರು ಪ್ರತಿಭಟನೆ ನಡೆಸಿದರು.


    ರೈತ ಮುಖಂಡ ಗಂಜಿಗೆರೆ ಪ್ರಸನ್ನ ಕುಮಾರ್ ಮಾತನಾಡಿ, ಮೊದಲೆರಡು ದಿನ ಸರ್ವರ್ ಸಮಸ್ಯೆ ಎದುರಾಗಿದೆ ಎಂದು ಸಬೂಬು ನೀಡಿ ರೈತರನ್ನು ಸಾಗುಹಾಕಿದರು. ಆದರೆ, ಇದೀಗ ಮೂರೇ ದಿನದಲ್ಲಿ ಸರ್ಕಾರ ನೋಂದಣಿ ಕಾರ್ಯ ಸ್ಥಗಿತಕ್ಕೆ ಆದೇಶ ನೀಡಿದೆ ಎಂದು ಹೇಳುತ್ತಿರುವುದು ಅಕ್ಷಮ್ಯ. ಇಡೀ ಪ್ರಕ್ರಿಯೆಯಲ್ಲಿ ಪ್ರಭಾವಿ ವರ್ತಕರ ಕೈವಾಡವಿದ್ದು ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಇದರಿಂದ ನಿಜವಾದ ರೈತರಿಗೆ ಭಾರಿ ಅನ್ಯಾಯವಾಗಿದೆ ಎಂದರು ದೂರಿದರು.


    ಅರಸೀಕೆರೆಯ ಎಪಿಎಂಸಿ ಕೇಂದ್ರದ ಹೊರಗಡೆಯೂ ಪಾರ್ಸ್ವರ್ಡ್ ಪಡೆದು ಪ್ರತಿಯೊಬ್ಬ ರೈತರಿಂದ ತಲಾ ಒಂದೆರಡು ಸಾವಿರ ರೂ. ಪಡೆದು ನೋಂದಣಿ ಮಾಡಿರುವ ದಾಖಲೆಗಳು ಲಭ್ಯವಾಗಿವೆ. ಕೇಂದ್ರ ಸರ್ಕಾರ ತಕ್ಷಣವೇ ವಿಚಕ್ಷಣ ದಳ ನೇಮಿಸಿ ಎಪಿಎಂಸಿ ಪ್ರಾಂಗಣದ ಆವರಣದಲ್ಲಿರುವ ಗೋದಾಮುಗಳ ದಾಸ್ತಾನು ಪರಿಶೀಲನೆ ನಡೆಸಬೇಕು. ಜತೆಗೆ ಇಡೀ ಗೋಲ್ಮಾಲ್ ಪ್ರಕ್ರಿಯೆಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಪ್ರತಿಭಟನಾ ನಿರತರೊಂದಿಗೆ ಮಾತನಾಡಿದರು.

    ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಸೋಮವಾರದವರೆಗೆ ಕಾದು ನೋಡೋಣ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ಹೆಜ್ಜೆ ಇಡೋಣ ಎಂದು ಪ್ರತಿಭಟನೆಕಾರರಿಗೆ ಸಮಾಧಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts