More

    ಔಷಧೋಪಚಾರ ಖರ್ಚು ನೀಡುವೆ

    ಗೊಳಸಂಗಿ: ರಾಜ್ಯದಲ್ಲಿ ಅಂಗವಿಕಲತೆ ಮತ್ತು ಬುದ್ಧಿಮಾಂದ್ಯರ ಸಂಖ್ಯೆ ಬಹಳಷ್ಟಿದೆ. ಅಂಥವರ ಮೇಲೆ ‘ವಿಜಯವಾಣಿ’ ಬೆಳಕು ಚೆಲ್ಲಿ ನಮ್ಮಂಥವರ ಗಮನಕ್ಕೆ ತರುತ್ತಿದೆ. ಆದರೆ, ಇಂಥವರನ್ನು ಸಂರಕ್ಷಿಸುವುದು ಕಷ್ಟಸಾಧ್ಯ ಕೆಲಸ. ಆದರೂ ದಾಯಿಹಲೀಮಾ ಆರೈಕೆ ಮಾಡಲು ಯಾರಾದರೂ ಮುಂದೆ ಬಂದರೆ ಆಕೆಯ ಔಷಧೋಪಚಾರ ಮತ್ತು ಆರೈಕೆಯ ಸಂಪೂರ್ಣ ಖರ್ಚನ್ನು ಸ್ವತಃ ನಾನೇ ಭರಿಸಲು ಸಿದ್ಧ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
    ‘ವಿಜಯವಾಣಿ’ಯಲ್ಲಿ ಮೇ 13 ರಂದು ‘ಅನಾಥೆಗೆ ಬೇಕಿದೆ ಆಸರೆ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ಲೇಖನ ಗಮನಿಸಿ ಮಂಗಳವಾರ ಗ್ರಾಮದ ದಾಯಿಹಲೀಮಾ ಮಂಟೂರ ಮನೆಗೆ ಭೇಟಿ ನೀಡಿ ಆಕೆಯ ಆರೋಗ್ಯ ವಿಚಾರಿಸಿದರು.
    ಬಸವನಬಾಗೇವಾಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಓತಗೇರಿ ಮಾತನಾಡಿ, ಆರೋಗ್ಯ ಇಲಾಖೆಯ ಮೇಲಧಿಕಾರಿಗಳೊಂದಿಗೆ ದಾಯಿಹಲೀಮಾಳ ದುಸ್ಥಿತಿ ಕುರಿತು ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾದರೆ ಮಾಡೋಣ ಎಂದರು.
    ತಾಪಂ ಇಒ ಭಾರತಿ ಚಲುವಯ್ಯ, ಗ್ರಾಪಂ ಅಧ್ಯಕ್ಷೆ ಲಲಿತಾ ಲಮಾಣಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುರಗೇಶ ಹೆಬ್ಬಾಳ, ಸಂಯುಕ್ತಾ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಬಂದೇನವಾಜ್ ಡೋಲಚಿ, ಬಸೀರ್‌ಅಹ್ಮದ್ ಹತ್ತರಕಿಹಾಳ ಮತ್ತಿತರರು ಇದ್ದರು.

    ಔಷಧೋಪಚಾರ ಖರ್ಚು ನೀಡುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts