More

    ಅಸ್ವಸ್ಥ ಮಹಿಳೆಗೆ ದೊರೆಯಿತು ಆಸರೆ

    ಗೊಳಸಂಗಿ: ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಸೂಚನೆ ಹಿನ್ನೆಲೆ ವಿಜಯಪುರದ ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ಗ್ರಾಮದಲ್ಲಿ ಅನಾಥವಾಗಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸೋಮವಾರ ತಮ್ಮ ಸುಪರ್ದಿಗೆ ಪಡೆದರು.
    ಕೆಲ ದಿನಗಳ ಹಿಂದೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ-50ರ ಬಳಿ ತಿರುಗಾಡುತ್ತಿದ್ದ ಮಹಿಳೆಯನ್ನು ರಕ್ಷಿಸಿ ಗ್ರಾಮದ ಮಾದರಿ ಬಡಾವಣೆಯ ನಿವಾಸಿ ಮುನೀರ್‌ಅಹ್ಮದ ಬಿಜಾಪುರ ರಕ್ಷಿಸಿ ಆಶ್ರಯ ನೀಡಿದ್ದರು. ಮಹಿಳೆಗೆ ಶಾಶ್ವತ ರಕ್ಷಣೆ ಒದಗಿಸುವಂತೆ ಹತ್ತಿರದ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆ, ವಿಜಯಪುರದ ಮಹಿಳಾ ಸಾಂತ್ವನ ಕೇಂದ್ರ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದರೂ ಸ್ಪಂದಿಸಿರಲಿಲ್ಲ.
    ಈ ಸಮಸ್ಯೆ ಕುರಿತು ವಿಜಯವಾಣಿ ೆ.3 ರಂದು ‘ಅನಾಥ ಮಹಿಳೆಗೆ ಗತಿ ಯಾರು?’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ನಂತರ ಬಸವನಬಾಗೇವಾಡಿ ತಹಸೀಲ್ದಾರ್ ಕಚೇರಿಗೆ ಮಹಿಳೆಯ ಸ್ಥಿತಿಗತಿ ಕುರಿತು ಮನವರಿಕೆ ಮಾಡಲಾಗಿತ್ತು. ಕೂಡಲೇ ‘ವಿಜಯವಾಣಿ’ ಕಳಕಳಿಗೆ ಸ್ಪಂದಿಸಿದ ತಹಸೀಲ್ದಾರ್ ಮಹಿಳೆಯ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ.

    ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಚಾರಿಸಿ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಮುಂದೆ ತಹಸೀಲ್ದಾರ್ ನಿರ್ದೇಶನದಂತೆ ನೊಂದ ಮಹಿಳೆಗೆ ಸೂಕ್ತ ರಕ್ಷಣೆ ನೀಡಲಾಗುವುದು.
    ರಾಜು ಚವಾಣ್, ನಿರಾಶ್ರಿತರ ಪರಿಹಾರ ಕೇಂದ್ರ ಮೇಲ್ವಿಚಾರಕ, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts