More

  ದೇಶಾದ್ಯಂತ 67,657 ಮೆಗಾವಾಟ್ ವಿದ್ಯುತ್ ಸಾಮರ್ಥ್ಯ

  ಗೊಳಸಂಗಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಒಡೆತನಕ್ಕೆ ಸಂಬಂಧಿಸಿದ ನಮ್ಮ ಸಂಸ್ಥೆ 1975 ರಲ್ಲಿ ಆರಂಭಗೊಂಡಿದ್ದು, ದೇಶಾದ್ಯಂತ 74 ಶಾಖೆ, 18,541 ನೌಕರರ ಬಳಗ ಹೊಂದಿದ್ದು, ಪ್ರಸ್ತುತ ಕಲ್ಲಿದ್ದಲು, ಸೌರ, ಸೋಲಾರ ಮತ್ತು ಹೈಡ್ರೋ ಮೂಲಗಳಿಂದ 67,657 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ನಮ್ಮ ಎನ್‌ಟಿಪಿಸಿ ಹೊಂದಿರುವುದು ಹೆಮ್ಮೆಯ ಸಂಗತಿ ಎಂದು ಕೂಡಗಿ ಎನ್‌ಟಿಪಿಸಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ (ಸಿಜಿಎಂ) ಕೆ.ಜೆ. ರೆಡ್ಡಿ ಹೇಳಿದರು.

  ಸಮೀಪದ ಕೂಡಗಿ ಎನ್‌ಟಿಪಿಸಿ ಸೂಪರ್ ಪವರ್ ಥರ್ಮಲ್ ಪ್ಲಾಂಟ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 47ನೇ ವರ್ಷದ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ಕರ್ನಾಟಕದ ವಿಜಯಪುರ ಜಿಲ್ಲೆಯ ಕೂಡಗಿ ಭಾಗದಲ್ಲಿ 2012ರಲ್ಲಿ ಆರಂಭಗೊಂಡ ನಮ್ಮ ಎನ್‌ಟಿಪಿಸಿ ಇಲ್ಲಿ ಪ್ರಸ್ತುತ 1500ಕ್ಕೂ ಅಧಿಕ ನೌಕರರು, 3000ಕ್ಕೂ ಅಧಿಕ ದಿನಗೂಲಿ ಕಾರ್ಮಿಕರನ್ನೊಳಗೊಂಡಿದ್ದು 4000 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಎಂದರು.

  ಒ ಆ್ಯಂಡ್ ವಿಭಾಗದ ಜಿಎಂ ವಿ.ಕೆ. ಪಾಂಡ್ಯ, ಎಪ್‌ಎಂ ವಿಭಾಗದ ಜಿಎಂ ಅಮರದೀಪ ಗುಪ್ತಾ, ಮೆಂಟೇನನ್ಸ್ ವಿಭಾಗದ ಜಿಎಂ ಅಲೋಕಕುಮಾರ ತ್ರಿಪಾಠಿ, ಆರ್ ಆ್ಯಂಡ್ ವಿಭಾಗದ ಡಿಜಿಎಂ ಎಂ.ಎಚ್. ಮಂಜುನಾಥ ಮತ್ತಿತರರಿದ್ದರು.

  ವಿದ್ಯಾರ್ಥಿಗಳಿಗೆ ಪುರಸ್ಕಾರ
  ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯ ಐದು ಬಾಧಿತ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ, ಮುತ್ತಗಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ 35 ವಿದ್ಯಾರ್ಥಿಗಳಿಗೆ 3000 ರೂ., ಹಣದೊಂದಿಗೆ ಸೌರ ಅಧ್ಯಯನ ದೀಪ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಜತೆಗೆ 11 ಬಾಲಕಿಯರಿಗೆ ಈ ವರ್ಷ ವಿದ್ಯಾರ್ಥಿವೇತನವನ್ನೂ ನೀಡಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts