More

    ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ಗೋಕರ್ಣೇಶ್ವರ ಜಾತ್ರೆ

    ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ಗೋಕರ್ಣೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ.27 ರಂದು ನಡೆಯಲಿದೆ.

    ಬೆಳಗ್ಗೆ ಉತ್ಸವ ಮೂರ್ತಿಯನ್ನು ಕೃಷ್ಣಾ ನದಿಗೆ ತೆಗೆದುಕೊಂಡು ಹೋಗಿ ವಿಶೇಷವಾಗಿ ಪೂಜೆ ಸಲ್ಲಿಸಿ 11 ಗಂಟೆಗೆ ಮರಳಿ ದೇವಸ್ಥಾನಕ್ಕೆ ಕರೆ ತರಲಾಗುತ್ತದೆ. ನಂತರ ಅಭಿಷೇಕ, ಪಂಚಾಮೃತ ಅಭಿಷೇಕ, ಅಕ್ಕಿ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ ನೈವೇದ್ಯ, ಅನ್ನ ಸಂತರ್ಪಣೆ ಸಂಜೆ 5 ಗಂಟೆಗೆ ವಾದ್ಯ ಮೇಳ, ಮಂತ್ರಘೋಷಗಳ ನಡುವೆ ರಥೋತ್ಸವ ಜರುಗಲಿದೆ. ಸುತ್ತಮುತ್ತಲೀನ ಗ್ರಾಮಸ್ಥರು ಜಾತ್ರಾ ವೈಭವಕ್ಕೆ ಸಾಕ್ಷಿಯಾಗಲಿದೆ.

    ಎತ್ತರ ಗುಡ್ಡದ ಮೇಲೆ ಇರುವ ದೇವಸ್ಥಾನ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದೆ. 12 ಜ್ಯೋತಿರ್ಲಿಂಗಗಳು ಇಲ್ಲಿವೆ. ಇಲ್ಲಿರುವ ಗವಿಯ ಮುಖಾಂತರ ಸಾಗಿದರೆ ಚಿತ್ರಭಾನುಕೋಟೆಯ ಗವಿ ಮಠಕ್ಕೆ ತಲುಪುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಜರುಗುತ್ತದೆ. ಸೋಮವಾರ ಮತ್ತು ಗುರುವಾರ ನಡೆಯುವ ಅಕ್ಕಿ ಮತ್ತು ಬೇಳೆ ಪೂಜಾ ಅಲಂಕಾರ ಗಮನ ಸೆಳೆಯುತ್ತದೆ.

    ಅನ್ನದಾಸೋಹ, ಅಂಬಲಿ ಪ್ರಸಾದ, ಪ್ರವಚನಗಳು ನಡೆಯುತ್ತದೆ. ಜಾತ್ರೆ ಅಂಗವಾಗಿ ಶನಿವಾರ ರಾತ್ರಿ ಅಪ್ಪ ಚಿಂತ್ಯಾಗ ಮಗಳ ಸಂತ್ಯಾಗ ಹಾಗೂ ಕಲಶಾರೋಹಣ ನಿಮಿತ್ತ ಭಾನುವಾರ ರಾತ್ರಿ 10 ಗಂಟೆಗೆ ಹುತ್ತದಲ್ಲಿ ಕೈ ಇಟ್ಟ ಮುತ್ತೈದೆ ನಾಟಕ ಪ್ರದರ್ಶನ ನಡೆಯಲಿದೆ. ಅಲ್ಲದೆ, ಟಗರಿನ ಕಾಳಗ, ಓಟದ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts