More

    ಕ್ರೀಡಾ ಸಾಧನೆಗೆ ಗುರಿ, ಪ್ರಯತ್ನ ಮುಖ್ಯ

    ಬಾಳೆಹೊನ್ನೂರು: ಕ್ರೀಡೆಯಲ್ಲಿ ಪ್ರಯತ್ನ ಮತ್ತು ಗುರಿ ಮುಖ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

    ಬೈರೇಗುಡ್ಡದಲ್ಲಿ ಭಾನುವಾರ ಕ್ರಿಕೆಟ್ ತರಬೇತಿ ನೀಡುವ ರಾಕಿನ್ ಸ್ಪೋರ್ಟಿಂಗ್ ಅಕಾಡೆಮಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಜನರು ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಲು ಗುಣಮಟ್ಟದ ತರಬೇತಿ ಪಡೆಯುವುದು ಅಗತ್ಯ. ಮಲೆನಾಡು ಭಾಗದಲ್ಲಿ ಕ್ರಿಕೆಟ್ ತರಬೇತಿ ನೀಡಲು ಅಕಾಡೆಮಿ ಆರಂಭಿಸಲಾಗಿದೆ. ಇಲ್ಲಿ ತರಬೇತಿ ಪಡೆದ ಆಟಗಾರರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಬೇಕು ಎಂಬುದು ಆಶಯ. ಕ್ರೀಡೆಯಲ್ಲಿ ಸತತ ಸಾಧನೆ ಮಾಡುವ ಆಟಗಾರರಿಗೆ ಸದಾ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿದರು.
    ರಾಕಿನ್ ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಇ್ತೆಖಾರ್ ಆದಿಲ್ ಮಾತನಾಡಿ, ಬಾಳೆಹೊನ್ನೂರಿನ ಯುವ ಆಟಗಾರರಿಗೆ ಪಟ್ಟಣದಲ್ಲಿ ಉತ್ತಮ ಕ್ರೀಡಾಂಗಣ ಬೇಕು. ಪಟ್ಟಣದಲ್ಲಿ ನಡೆಯುವ ಹಲವು ಕ್ರಿಕೆಟ್ ಪಂದ್ಯಾವಳಿಗಳನ್ನು ನೋಡಲು ರಾಜ್ಯ, ರಾಷ್ಟ್ರಮಟ್ಟದ ಆಟಗಾರರು ಬರುತ್ತಾರೆ. ನಮ್ಮೂರಿನ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಆಡುವಂತೆ ತರಬೇತಿ ನೀಡುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
    ಹ್ಯಾಮರ್ ಥ್ರೋನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಸಾಲೀಂ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಪರ್ವೀಜ್ ಅವರನ್ನು ಸನ್ಮಾನಿಸಲಾಯಿತು.
    ಅಕಾಡೆಮಿ ಸ್ಥಾಪಕ ರಾಕಿನ್ ಆದಿಲ್, ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್, ಮಹಮ್ಮದ್ ಜುಹೇಬ್, ಬಿ.ಕೆ.ಮಧುಸೂದನ್, ಬಿ.ಸಿ.ಸಂತೋಷ್‌ಕುಮಾರ್, ಪ್ರಶಾಂತ್ ಬನ್ನೂರು, ಸತೀಶ್ ಅರಳೀಕೊಪ್ಪ, ಎಸ್.ಪೇಟೆ ಸತೀಶ್, ಗುರುಮೂರ್ತಿ ಬೆಳಸೆ, ಜಾನ್ ಡಿಸೋಜಾ, ಗಿರೀಶ್ ಹುಯಿಗೆರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts