More

    ಹಳದಿ ಬೋರ್ಡ್‌ನ ವಾಹನಗಳಲ್ಲಿ ಬಾಡಿಗೆಗೆ ತೆರಳಿ

    ಸೋಮವಾರಪೇಟೆ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಶುಕ್ರವಾರ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಆರ್ಗನೈಜೇಷನ್ ವತಿಯಿಂದ 75ನೇ ಗಣರಾಜ್ಯೋತ್ಸವ, ಚಾಲಕ ಚೈತನ್ಯೋತ್ಸವ ಸಮಾವೇಶ ಮತ್ತು ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು.


    ಕೆಟಿಡಿಒ ರಾಜ್ಯ ಸಮಿತಿ ಸಹಕಾರ್ಯದರ್ಶಿ ಮಹಮ್ಮದ್ ಹುಸೆನ್ ಗುಂಡಣ್ಣ ಮಾತನಾಡಿ, ಇಂದಿಗೂ ಹೆಚ್ಚಿನವರು ಬಿಳಿ ಬೋರ್ಡ್ ವಾಹನಗಳನ್ನು ಬಾಡಿಗೆಗೆ ಕೊಂಡೊಯ್ಯುತ್ತಿರುವುದು ಕಂಡುಬರುತ್ತಿದೆ. ಬಾಡಿಗೆ ಹೋಗುವ ಸಂದರ್ಭ ಅಪಘಾತವಾದಲ್ಲಿ ಅಪಘಾತಕ್ಕೀಡಾದವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಬದಲಾಗಿ ಹಳದಿ ಬಣ್ಣದ ಬೋರ್ಡ್‌ನ ವಾಹನಗಳಲ್ಲಿ ಹೋದ ಸಂದರ್ಭ ಅಪಘಾತಕ್ಕೀಡಾದರೆ, ವಿಮೆ ಸಿಗುವುದು. ಇದರಿಂದ ಸಾಕಷ್ಟು ಕುಟುಬಂಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಾದರೂ, ಎಲ್ಲರೂ ಹಳದಿ ಬೋರ್ಡ್‌ನ ವಾಹನಗಳಲ್ಲಿ ಬಾಡಿಗೆಗೆ ತೆರಳಬೇಕು ಎಂದು ಹೇಳಿದರು.


    ಕೇಂದ್ರ ಸರ್ಕಾರ ಇತ್ತೀಚೆಗೆ ವಾಹನ ಚಾಲಕರಿಗೆ ಅನನುಕೂಲವಾಗುವಂತಹ ಕಾನೂನನ್ನು ಜಾರಿಗೆ ತಂದಿದೆ. ಇದರಿಂದ ಅಪಘಾತ ಮಾಡಿದ ಚಾಲಕರಿಗೆ 7 ವರ್ಷ ಜೈಲು ವಾಸ ಮತ್ತು ಎದುರುದಾರರಿಗೆ 7 ಲಕ್ಷ ರೂ.ವರೆಗೆ ಪರಿಹಾರ ನೀಡಬೇಕಾಗಿದೆ. ಅನಿರೀಕ್ಷಿತವಾಗಿ ಅಪಘಾತಗಳು ನಡೆಯುತ್ತವೆ. ಕೇಂದ್ರದ ಈ ಕಾನೂನಿಂದ ವಾಹನ ಚಾಲನೆ ಮಾಡಿ ಜೀವನ ನಡೆಸುತ್ತಿರುವ ಸಾಕಷ್ಟು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಕೂಡಲೇ ಈ ಕಾನೂನನ್ನು ಹಿಂದಕ್ಕೆ ಪಡೆಯಬೇಕೆಂದರು.


    ಕೆಟಿಡಿಒ ಜಿಲ್ಲಾ ಗೌರವಾಧ್ಯಕ್ಷ ಪರಶುರಾಮ್ ಕಳ್ಳಿಚಂಡ, ತಾಲೂಕು ಘಟಕದ ಉಪಾಧ್ಯಕ್ಷ ಪಿ.ವಿ. ಕೃಷ್ಣ, ಸಾಹಿತಿಗಳಾದ ಜಲಾ ಕಾಳಪ್ಪ, ರಾಣಿ ರವೀಂದ್ರ, ಕೆಟಿಡಿಒ ರಾಜ್ಯ ಸಮಿತಿ ಕಾರ್ಯದರ್ಶಿಗಳಾದ ಎಸ್.ಆರ್.ಪ್ರಸನ್ನ, ವಿರಾಜಪೇಟೆ ಸಲಹೆಗಾರರಾದ ರಫೀಕ್, ಪ್ರಮುಖರಾದ ರಾಧಾ, ಮಂಜುನಾಥ್, ಗುರು ಕುಂದಾಪುರ, ರೆಜೀನ ಹಣಕೋಡು, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿಯ ಕೆಟಿಡಿಒ ಘಟಕಗಳ ಪದಾಧಿಕಾರಿಗಳು ಇದ್ದರು.


    ಮಧ್ಯಾಹ್ನ ವಿಶ್ವರೂಪ ವಾದ್ಯಗೊಷ್ಠಿ ಕಲಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಹಾಗೂ 14 ವರ್ಷ ಒಳಪಟ್ಟ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ನೃತ್ಯೋತ್ಸವ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts