More

    ಈಡೇರಿತು ಆಲ್​ರೌಂಡರ್​ ಮ್ಯಾಕ್ಸಿ ಆಸೆ: ಹರಾಜಿನಲ್ಲಿ ಆರ್​ಸಿಬಿ ಪಾಲಾದ ಆಸಿಸ್​ ದಾಂಡಿಗ!

    ಚೆನ್ನೈ: 2021ನೇ ಸಾಲಿನ ಹಾಗೂ 14ನೇ ಆವೃತ್ತಿಯ ಐಪಿಎಲ್​ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೆಯುತ್ತಿದ್ದು, ಎಂಟು ಫ್ರಾಂಚೈಸಿಯ ಪ್ರಮುಖರು ಬಿಡ್​ನಲ್ಲಿ ಭಾಗವಹಿಸಿದ್ದಾರೆ. ಆಟಗಾರರ ಖರೀದಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ಬಿಕರಿಯಾಗಿದ್ದಾರೆ.

    ಕೋಲ್ಕತ ನೈಟ್​ ರೈಡರ್ಸ್​, ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ತಂಡಗಳು ಮ್ಯಾಕ್ಸ್​ವೆಲ್​ಗಾಗಿ ಹರಾಜಿನಲ್ಲಿ ತೀವ್ರ ಪೈಪೋಟಿ ನಡೆಸಿದವು. ಹರಾಜು ಮೊತ್ತ 12.25 ಕೋಟಿ ತಲುಪಿದಾಗ ಕೆಕೆಆರ್​, ಬಿಡ್​ನಿಂದ ಹಿಂದೆ ಸರಿಯಿತು. ಬಳಿಕ ಸಿಎಸ್​ಕೆ ಮತ್ತು ಆರ್​ಸಿಬಿ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಅಂತಿಮವಾಗಿ ಮ್ಯಾಕ್ಸ್​ವೆಲ್​ 14.25 ಕೋಟಿ ರೂ.ಗೆ ಆರ್​ಸಿಬಿ ತೆಕ್ಕೆಗೆ ಜಾರಿದರು.

    ಇದನ್ನೂ ಓದಿರಿ: ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಬಿಡ್​ ಆದವರು ಯಾರು ಗೊತ್ತೇ? ಇಲ್ಲಿದೆ ಹರಾಜಿನ ಇತಿಹಾಸ…

    ಮ್ಯಾಕ್ಸ್​ವೆಲ್​ ಕಳೆದ ಬಾರಿ 10.75 ಕೋಟಿ ರೂ.ಗೆ ಪಂಜಾಬ್​ ಪಾಲಾಗಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಇದಾದ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಮ್ಯಾಕ್ಸ್​ವೆಲ್​​ ಅಬ್ಬರಿಸಿ ಐಪಿಎಲ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

    ಇತ್ತೀಚೆಗೆ ಮಾತನಾಡಿದ ಮ್ಯಾಕ್ಸ್​ವೆಲ್​ ಆರ್​ಸಿಬಿ ತಂಡದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅದರಂತೆಯೇ ಇಂದು ಚೆನ್ನೈನಲ್ಲಿ ನಡೆದ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಆರ್​ಸಿಬಿ ಸೇರಿಕೊಂಡಿದ್ದಾರೆ.

    ಜೀವನಪೂರ್ತಿ ಜತೆಯಿರುವ ಕನಸು ಕಂಡವರು ಒಟ್ಟಿಗೇ ಜಲಸಮಾಧಿಯಾದರು…! ಕಣ್ಣೀರು ತರಿಸುವ ಕಥೆಯಿದು

    ‘ನಾ ಪುರುಷನಿಂದ ಗರ್ಭಿಣಿಯಾಗಲಿಲ್ಲ’ ಈ ಗರ್ಭಿಣಿಯ ಕಥೆ ಕೇಳಿದರೆ ನೀವೂ ಗಾಬರಿಯಾಗುತ್ತೀರ..

    ಬಿಜೆಪಿ ಸೇರಲು ಸಜ್ಜಾದ ‘ಮೆಟ್ರೊ ಮ್ಯಾನ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts