More

    ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ಮೆರುಗು

    ಭದ್ರಾವತಿ: ಮುಸ್ಲಿಂ ಸಮುದಾಯದವರು ನಗರದಲ್ಲಿ ಈದ್ ಮಿಲಾದ್ ಮೆರವಣಿಗೆಯನ್ನು ಭಕ್ತಿ, ಸಡಗರ, ಸಂಭ್ರಮದಿAದ ಆಚರಿಸಿದರು.
    ಬೃಹತ್ ಮೆರವಣಿಗೆಯಲ್ಲಿ ಧಾರ್ಮಿಕತೆಯ ಪುಣ್ಯ ಸ್ಥಳಗಳಾದ ಮೆಕ್ಕಾ, ಮದೀನ ಸ್ತಬ್ಧ ಚಿತ್ರಗಳೊಂದಿಗೆ ಯುವಕರು ಧರ್ಮದ ಧ್ವಜ ಹಿಡಿದು ಕೈನಲ್ಲಿ ತಿರುಗಿಸುತ್ತಾ ಸಾಗಿದವು. ಕುರಾನ್ ಸೇರಿ ಧರ್ಮಕ್ಕೆ ಸಂಬAಽಸಿದ ಪ್ರವಚನಗಳನ್ನು ರಸ್ತೆಯುದ್ದಕ್ಕೂ ಹಾಡುತ್ತ ಸಾಗಿದರು.
    ಈದ್- ಮಿಲಾದ್ ಪ್ರಯುಕ್ತ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ನಿಂದ ಹೊಳೆಹೊನ್ನೂರು ವೃತ್ತದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದ ೨೦೦ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಶಾಸಕ ಬಿ.ಕೆ.ಸಂಗಮೇಶ್ವರ್ ಮುಸ್ಲಿಂ ಸಮುದಾಯದ ಟ್ರಸ್ಟ್ ಆಯೋಜಿಸಿದ್ದ ಬಡವರಿಗೆ ಸೀರೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂರಾರು ವಿವಿಧ ಸಮುದಾಯದ ಬಡ ಮಹಿಳೆಯರಿಗೆ ಸೀರೆ ವಿತರಿಸಿದರು. ಅಲ್ಲಲ್ಲಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು.
    ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ನೀಡುವ ಉದ್ದೇಶದಿಂದ ಆರ್‌ಎ ಎಫ್ ತಂಡ ಸೇರಿ ನೂರಾರು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಡಿವೈಎಸ್‌ಪಿ ನಗರ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕರು. ಸಬ್ ಇನ್ಸ್ಪೆಕ್ಟರ್‌ಗಳು, ಕೆಎಸ್‌ಆರ್‌ಪಿ ತುಕಡಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಮಧ್ಯಾಹ್ನ 2 ಗಂಟೆಗೆ ಹೊಳೆಹೊನ್ನೂರು ವೃತ್ತದಿಂದ ಆರಂಭವಾದ ಮೆರವಣಿಗೆಯು ಶಾಂತಿಯುತವಾಗಿ ತರೀಕೆರೆ ರಸ್ತೆಯಲ್ಲಿ ಸಾದಾತ್ ದರ್ಗಾದವರೆಗೂ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ರಾತ್ರಿ ೭ ಗಂಟೆಯ ನಂತರ ಮುಕ್ತಾಯಗೊಳಿಸಲಾಯಿತು.
    ಅಂಜುಮಾನ್ ಸಂಸ್ಥೆ ಅಧ್ಯಕ್ಷ ಮುರ್ತುಜಾಖಾನ್, ಸಿ.ಎಂ.ಖಾದರ್, ಅಮೀರ್‌ಜಾನ್, ಬಾಬುಜಾನ್, ಬಾಷಾ, ನಾಸೀರ್, ಜಹೀರ್‌ಜಾನ್, ನೂರ್ ಅಹಮದ್, ಸಾದಿಕ್ ಅಹಮದ್, ಮಣಿಶೇಖರ್, ಜೆಬಿಟಿ ಬಾಬು, ಆಪ್ತಬ್ ಮಹಮದ್, ಜಗನ್ನಾಥ್, ಬಿ.ಕೆ.ಮೋಹನ್, ನಗರಸಭೆ ಅಧ್ಯಕ್ಷೆ ಶ್ರುತಿ ವಸಂತಕುಮಾರ್, ಎಸ್.ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts