More

    ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

    ಲೋಕಾಪುರ: ಪಾಲಕರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೇಲ್ಲಿಕೇರಿ ಹೇಳಿದರು.

    ಪಟ್ಟಣದ ಉದಪುಡಿ ಫೌಂಡೇಷನ್‌ನ ಅಕ್ಷರ ಅಕಾಡೆಮಿ ಶಾಲೆಯಲ್ಲಿ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಹಿಂದುಳಿವಿಕೆಯಲ್ಲಿ ಶಿಕ್ಷಣದ ಕೊರತೆ ತೀವ್ರವಾಗಿದೆ. ಹೀಗಾಗಿ ಪಾಲಕರು ಮಕ್ಕಳನ್ನು ತಮ್ಮ ಸಂಕಷ್ಟ ನಿವಾರಣೆಗೆ ಬಳಸಿಕೊಳ್ಳದೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ರಾಷ್ಟ್ರದ ಸಂಪತ್ತನ್ನಾಗಿ ಪರಿವರ್ತಿಸಬೇಕು ಎಂದರು.

    ಆರ್‌ಬಿಜಿ ಶಾಲೆ ನಿವೃತ್ತ ಪ್ರಾಚಾರ್ಯ ವಿ.ಬಿ. ಮಾಳಿ ಮಾತನಾಡಿದರು. ಅಡುಗೆ ಮಾಡುವವರು ಹಾಗೂ ಶಾಲೆ ವಾಹನ ಚಾಲಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಸಂಸ್ಥೆ ಸದಸ್ಯ ಸದಾಶಿವ ಉದಪುಡಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಲ್.ಸಿ. ಉದಪುಡಿ, ಗಣಿ ಉದ್ಯಮಿ ಎಸ್.ಎನ್. ಹಿರೇಮಠ, ಮುಖ್ಯಶಿಕ್ಷಕ ಪ್ರಭಾಕರ ದರ್ಜೆ, ಸಂಸ್ಥೆ ನಿರ್ದೇಶಕ ಸದಾಶಿವ ಉದಪುಡಿ, ಷಣ್ಮುಖಪ್ಪ ಕೊಲ್ಹಾರ, ಪ್ರಕಾಶ ಚುಳಕಿ, ಬಸವರಾಜ ಕಾತರಕಿ, ಅರುಣ ನರಗುಂದ, ಸಹ ಶಿಕ್ಷಕಿಯರಾದ ಸವಿತಾ ಕಟಗೇರಿ, ಸುನಂದಾ ಉಪ್ಪಾರ, ಶಿವಾನಂದ ಉಪ್ಪಾರ, ಪ್ರವೀಣ ತಳವಾರ, ರೇಖಾ ಗಸ್ತಿ, ಪ್ರಮೀಳಾ ಜಲವಾದಿ, ಹಯತಮಾ ರಾಮದುರ್ಗ, ಜಿನತ್ ಅಟೋನಿ, ಕೃತಿಕಾ ಪಾಟೀಲ, ಸಹನಾ ಹಲಗತ್ತಿ, ವೆಂಕುಬಾಯಿ ಮುಳ್ಳೂರ, ಸುಧಾ ಪಾಟೀಲ ಹಾಗೂ ಪಾಲಕರು, ಮಕ್ಕಳು ಶಾಲಾ ಸಿಬ್ಬಂದಿ ವರ್ಗ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts