More

    ಅಕ್ರಮ, ಒತ್ತುವರಿ ಭೂಮಿ ನಿರಾಶ್ರಿತರಿಗೆ ನೀಡಿ

    ಬಣಕಲ್: ಅಕ್ರಮ ಹಾಗೂ ಒತ್ತುವರಿ ಭೂಮಿ ಬಿಡಿಸಿ ನಿರಾಶ್ರಿತರಿಗೆ ನೀಡಬೇಕು ಎಂದು ಒತ್ತಾಯಿಸಿ ನೂರಾರು ನಿವೇಶನ ರಹಿತರು ಕೂವೆ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದರು.
    ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು ಮಾತನಾಡಿ, ಕೂವೆ ಗ್ರಾಮದ ಸರ್ವೇ ನಂ.256, 164, 275, 271, 68, ಕಲ್ಮನೆ ಗ್ರಾಮದ ಸರ್ವೇ ನಂ.51, 46, 49, ಕೆ.ತಲಗೂರು ಗ್ರಾಮದ ಸರ್ವೇ ನಂ.49 ಹಾದಿಓಣಿ ಗ್ರಾಮದ ಸರ್ವೇ ನಂ.56, 22, 21 ರಲ್ಲಿ ಸರ್ಕಾರಿ ಜಮೀನಿದ್ದರೂ ನಿವೇಶನ ರಹಿತರಿಗೆ ನಿವೇಶನ ಕೊಡಲು ಗ್ರಾಪಂಗೆ ಸಾಧ್ಯವಾಗಿಲ್ಲ. ಆದರೆ ಈ ಎಲ್ಲ ಸರ್ವೇ ನಂಬರ್‌ನಲ್ಲಿ ಅಕ್ರಮ ಭೂ ಮಂಜೂರಾತಿ ಮಾಡಲಾಗಿದೆ ಎಂದು ದೂರಿದರು.
    ಇದೇ ಗ್ರಾಪಂನಲ್ಲಿ ಅಕ್ರಮ ಮಂಜೂರಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿಯ ಬೇನಾಮಿ ಆಸ್ತಿ ಇದ್ದು ಅದನ್ನು ತೆರವುಮಾಡಿಸಿ ನಿವೇಶನ ರಹಿತರು ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಮೀಸಲಿಡಬೇಕು. ನಮ್ಮ ಬೇಡಿಕೆ ಈಡೇರಿಕೆಗಾಗಿ ಸ್ಥಳೀಯ ಪಂಚಾಯಿತಿ ಎದುರು ಧರಣಿ ಆರಂಭಿಸಿದ್ದೇವೆ. ಗ್ರಾಮ ಪಂಚಾಯಿತಿ ನಮ್ಮ ಬೇಡಿಕೆಗೆ ಸ್ಪಂದಿಸುವ ಮೂಲಕ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
    ನಿವೇಶನ ರಹಿತರು ಕೂವೆ ಗ್ರಾಮ ಪಂಚಾಯತಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 15 ವರ್ಷ ಕಳೆದರೂ ನಿವೇಶನ ನೀಡಿಲ್ಲ. ಕೂಡಲೇ ಕೂವೆ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಭೂ ಮಂಜೂರಾತಿ ಮಾಡಿರುವ ಭೂಮಿ ಮತ್ತು ಅಧಿಕಾರಿಗಳ ಬೇನಾಮಿ ಆಸ್ತಿ ವಶಕ್ಕೆ ಪಡೆದು ನಿವೇಶನ ರಹಿತರಿಗೆ ಗ್ರಾಮದ ಅಭಿವೃದ್ಧಿಗೆ, ಸ್ಮಶಾನ, ಆಟದ ಮೈದಾನ, ಅಂಬೇಡ್ಕರ್ ಭವನ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
    ಸುಂದರ್ ಬಾಳೂರು, ಮಂಜು, ರವಿ, ಲೋಕೇಶ್, ಮಲ್ಲೇಶ್, ಸಿಗಮಣಿ, ರೇಣುಕಾ, ಲಕ್ಷ್ಮೀ, ಅನಿಲ್, ಬಂಗಾರಪ್ಪ, ಅಕ್ಷತ್, ಚಂದ್ರು, ಅನಿಲ್ ಕುಮಾರ್, ನಾರಾಯಣ, ಮಂಜುಳಾ, ಪ್ರೇಮ ಸೀನಾ, ಪುಷ್ಪಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts