More

    ಸಂಸ್ಕಾರಯುತ ಶಿಕ್ಷಣ ಕೊಡಿ

    ಕಡೂರು: ಮಕ್ಕಳ ಬೆಳವಣಿಗೆಯಲ್ಲಿ ಸಂಸ್ಕಾರಯುತ ಶಿಕ್ಷಣ ಮುಖ್ಯ ಎಂದು ಶಾಸಕ ಎಚ್.ಡಿ.ತಮಯ್ಯ ತಿಳಿಸಿದರು.

    ಬ್ಯಾಲದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿ, ಶಿಕ್ಷಣವಿದ್ದರೆ ಏನನ್ನಾದರೂ ಸಾಧಿಸಬಹುದು. ಸಾಕ್ಷರತೆಯಲ್ಲಿ ಕರ್ನಾಟಕ ಮೊದಲ ರಾಜ್ಯವಾಗಬೇಕು. ಇದಕ್ಕೆ ಪಾಲಕರು, ಶಿಕ್ಷಕರ ಸಹಕಾರ ಅಗತ್ಯ ಎಂದು ಹೇಳಿದರು.
    ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣ ಪಡೆಯಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧ್ದಿಗೆ ಗ್ರಾಮಸ್ಥರು ಕೈಜೋಡಿಸಬೇಕು. ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆ ಗುರುತಿಸಿ ಅಭಿವೃದ್ಧಿಪಡಿಸುವ ಚಿಂತನೆ ಹೊಂದಲಾಗಿದೆ ಎಂದರು.
    ಬಿಇಒ ಗಂಗಾಧರಪ್ಪ ಮಾತನಾಡಿ, ವಿವೇಕ ಯೋಜನೆಯಡಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.
    ಗ್ರಾಪಂ ಅಧ್ಯಕ್ಷ ತ್ರಿಮೂರ್ತಿ, ಉಪಾಧ್ಯಕ್ಷೆ ಸುಮಿತ್ರಾಬಾಯಿ, ಎಸ್‌ಡಿಎಂಸಿ ಅಧ್ಯಕ್ಷ ರಾಜಪ್ಪ, ಜಿಪಂ ಮಾಜಿ ಸದಸ್ಯೆ ಹೇಮಾವತಿ, ತಾಪಂ ಮಾಜಿ ಸದಸ್ಯ ಚಂದ್ರಪ್ಪ, ನಟರಾಜ್, ಪಿಡಬ್ಲುೃಡಿ ಅಭಿಯಂತ ಗವಿರಂಗಪ್ಪ, ಎಇಇ ಲೋಕೇಶ್, ಮಮತಾ, ಸಣ್ಣಪ್ಪ, ಕುಮಾರಪ್ಪ, ನೇತ್ರಾವತಿ, ಚೇತನ್, ಸುರೇಂದ್ರಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts