More

    ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿ

    ರಾಯಚೂರು: ಪ್ರಧಾನಮಂತ್ರಿ ಸಲ್ ಭೀಮಾ ಯೋಜನೆಯಡಿ ವಿಮಾ ಕಂತು ಕಟ್ಟಿರುವ ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡಬೇಕು ಎಂದು ದೇವದುರ್ಗ ತಾಲೂಕು ವಂದಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    ಗ್ರಾಮಸ್ಥರ ನಿಯೋಗ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮಂಗಳವಾರ ಮನವಿ ಸಲ್ಲಿಸಿ, ರಾಜ್ಯದಲ್ಲಿ ತೀವ್ರ ಬರದಿಂದ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿದ್ದು, ಕೂಡಲೇ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
    ಗ್ರಾ.ಪಂ. ವ್ಯಾಪ್ತಿಯಲ್ಲಿನ ಜಮೀನುಗಳಿಗೆ ನೀರಾವರಿ ಸೌಲಭ್ಯವಿಲ್ಲ. ಮಳೆ ಆಧಾರಿತ ಜಮೀನುಗಳಾಗಿವೆ. ಮಳೆಯಿಲ್ಲದ ಕಾರಣ ಬೆಳೆಗಳು ಹಾನಿಗೊಳಗಾಗಿ ರೈತರು ನಷ್ಟಕ್ಕೆ ಗುರಿಯಾಗುವಂತಾಗಿದೆ. ಕೂಡಲೇ ವಿಮಾ ಕಂತು ಪಾವತಿಸಿದ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ನಿಯೋಗದಲ್ಲಿ ಗ್ರಾ.ಪಂ. ಸದಸ್ಯ ವೀರೇಶ ಗೌಡ, ಗ್ರಾಮಸ್ಥರಾದ ಭೀಮನಗೌಡ ಪೊಲೀಸ್ ಪಾಟೀಲ್, ಗೌಡರಡ್ಡೆಪ್ಪ, ನಾಗರಾಜ ತೋಟದ, ಕೆ.ಸಂಗನಗೌಡ, ಭೀಮಣ್ಣ ಗೆಜ್ಜಲಗಟ್ಟಿ, ಆದನಗೌಡ, ಸಿದ್ದಪ್ಪ ರೆಡ್ಡಿ, ರುದ್ರಪ್ಪ ಬೊಂಬಾಯಿ, ಶಿವಪ್ಪ, ಅಮರೇಶ ಬೋರೆಡ್ಡಿ, ಶಿವಪ್ಪ ತಳವಾರ, ರಂಗಣ್ಣ ಮಡಿವಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts