More

    ಮಿಷನರಿ ಶಾಲೆಗಳಲ್ಲಿ ಸಂಸ್ಕಾರದ ಕೊರತೆ: ಗೀತೆ, ಹನುಮಾನ್ ಚಾಲೀಸಾ ಹೇಳಿಕೊಡಬೇಕು: ಕೇಂದ್ರ ಸಚಿವ ಗಿರಿರಾಜ್ ಸಿಂಗ್​

    ಬೇಗುಸರಾಯ್​(ಬಿಹಾರ): ಮಿಷನರಿ ಶಾಲೆಗಳಲ್ಲಿ ಸಂಸ್ಕಾರದ ಕೊರತೆ ಇದ್ದು, ಅಲ್ಲಿ ಕಲಿಯುವ ಮಕ್ಕಳು ವಿದೇಶಕ್ಕೆ ತೆರಳಿದರೆ ಬೀಫ್ ತಿನ್ನುವುದಕ್ಕಾರಂಭಿಸುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್​ ಹೇಳಿದ್ದಾರೆ.

    ಸ್ವಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಅವರು, ಸರ್ಕಾರಿ ಶಾಲೆಯಿಂದ ಹಿಡಿದು ಖಾಸಗಿ ಶಾಲೆಗಳ ತನಕ ಎಲ್ಲದರಲ್ಲೂ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಶ್ಲೋಕ, ಹನುಮಾನ್ ಚಾಲೀಸಾಗಳನ್ನು ಹೇಳಿಕೊಡಬೇಕು. ಅದನ್ಹು ರೂಢಿ ಮಾಡಿಕೊಳ್ಳಬೇಕು. ಇದನ್ನು ಆರಂಭಿಸುವುದರಿಂದ ನಮ್ಮ ಮೇಲೆ ಕೇಸರೀಕರಣದ ಆರೋಪ ಬರಬಹುದು. ಆದಾಗ್ಯೂ, ಇಲ್ಲಿರುವ ಎಲ್ಲ ಪಾಲಕರಲ್ಲಿ ಕೇಳಿಕೊಳ್ಳುವುದು ಇಷ್ಟೆ- ಖಾಸಗಿ ಶಾಲೆಗಳಲ್ಲೂ ಗೀತೆ, ಹನುಮಾನ್ ಚಾಲೀಸಾ ಹೇಳಿಕೊಡಬೇಕು ಎಂಬ ಆಗ್ರಹ ನಿಮ್ಮ ಕಡೆಯಿಂದ ಬರಬೇಕು ಎಂದರು.

    ಈ ಬೇಡಿಕೆಯನ್ನು ಸಮರ್ಥಿಸಿಕೊಂಡ ಗಿರಿರಾಜ್ ಸಿಂಗ್, ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಮಿಷನರಿ ಸ್ಕೂಲ್​ಗಳಲ್ಲಿ ಸುಶಿಕ್ಷಿತ ವರ್ಗದ ಮಕ್ಕಳು ಕಲಿಯುತ್ತಿದ್ದಾರೆ. ಅವರು ಜೀವನದಲ್ಲಿ ಯಶಸ್ವಿಯಾಗಿ ಉದ್ಯೋಗಕ್ಕೆ ಸೇರುತ್ತಾರೆ ಎಂಬುದು ನಿಜ. ಆದರೆ, ಅವರು ವಿದೇಶಕ್ಕೆ ಹೋದಾಗ ಅಲ್ಲಿ ಬೀಫ್ ತಿನ್ನುತ್ತಾರೆ. ಯಾಕೆ ಹೀಗೆ? ನಾವು ಅವರಲ್ಲಿ ಸಂಸ್ಕಾರವನ್ನು ಬೆಳೆಸಲಿಲ್ಲ ಎಂಬುದೇ ಇದಕ್ಕೆ ಕಾರಣ. ಪದೇಪದೆ ನಮ್ಮನ್ನು ಸಂಪ್ರದಾಯವಾದಿಗಳು ಎಂದು ಆರೋಪಿಸಲಾಗುತ್ತದೆ. ನಮ್ಮ ಸಂಸ್ಕೃತಿಗೆ ಅಂಥದ್ದೊಂದು ಚೌಕಟ್ಟಿದೆ.ನಾವು ಇರುವೆಗಳಿಗೆ ಸಕ್ಕರೆ ಹಾಕುತ್ತೇವೆ, ಹಾವಿಗೆ ಹಾಲೆರೆಯುತ್ತೇವೆ. ಕೆಲವೊಮ್ಮೆ ಇಂತಹ ಹಾವೇ ನಮ್ಮನ್ನು ಕಡಿಯಬಹುದು ಎಂದು ಹೇಳಿದರು. ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಈಡಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts