More

    ಕತ್ತಲಾದರೂ ಮನೆಗೆ ಹಿಂತಿರುಗದ ಹೆಣ್ಣುಮಕ್ಕಳು, ಹುಡುಕುತ್ತಾ ಹೊಲಕ್ಕೆ ಹೋದ ಪಾಲಕರಿಗೆ ಕಾದಿತ್ತು ಶಾಕ್!

    ಕಾನಪುರ: ಜಾನುವಾರುಗಳಿಗೆ ಮೇವು ತರಲು ಹೊಲಕ್ಕೆ ಹೋದ ಮೂವರು ಅಕ್ಕತಂಗಿಯರು ಅವರದೇ ಹೊಲದಲ್ಲಿ ನಿಗೂಢ ರೀತಿಯಲ್ಲಿ ಜ್ಞಾನ ಕಳೆದುಕೊಂಡು ಬಿದ್ದಿರುವ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಈ ಮೂವರು ಅಪ್ರಾಪ್ತ ವಯಸ್ಕ ದಲಿತ ಹೆಣ್ಣುಮಕ್ಕಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬಳು ಗಂಭೀರ ಸ್ಥಿತಿಯಲ್ಲಿದ್ದಾಳೆ ಎನ್ನಲಾಗಿದೆ.

    ಉನ್ನಾವ್ ಜಿಲ್ಲೆಯ ಬಬರುಹಾ ಗ್ರಾಮದಲ್ಲಿ ವಾಸಿಸುತ್ತಿದ್ದ 13, 16 ಮತ್ತು 17 ವರ್ಷ ವಯಸ್ಸಿನ ಹುಡುಗಿಯರು ಆಕಳಿಗೆ ಮೇವು ತರುವುದಕ್ಕೋಸ್ಕರ ಬುಧವಾರ(ಫೆಬ್ರವರಿ 17) ಮಧ್ಯಾಹ್ನ ಮನೆಯಿಂದ ಹೊರಟಿದ್ದರು. ಸಂಜೆ ಕತ್ತಲಾದರೂ ಮನೆಗೆ ಹಿಂದುರುಗದಿದ್ದಾಗ, ಪಾಲಕರು ಎಲ್ಲಾ ಕಡೆ ಹುಡುಕಲು ಆರಂಭಿಸಿದರು. ಕುಟುಂಬಕ್ಕೆ ಸೇರಿದ ಹೊಲದಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಹುಡುಗಿಯರನ್ನು ದುಪಟ್ಟಾದಿಂದ ಕಟ್ಟಿಹಾಕಲಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಕಿರಿಯ ಹುಡುಗಿಯರಿಬ್ಬರೂ ಸಾವಪ್ಪಿದ್ದಾರೆ. 17 ವರ್ಷದ ರೋಶನಿ ಗಂಭೀರ ಸ್ಥಿತಿಯಲ್ಲಿದ್ದು, ಉನ್ನಾವ್ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

    ಇದನ್ನೂ ಓದಿ: ‘ನಾನು ಸಾಯುತ್ತಿದ್ದೇನೆ, ಕ್ಷಮಿಸಿ… ಸಿದ್ದರಾಮಯ್ಯ ಸರ್‌, ಯಶ್‌ ಅಣ್ಣ ಪ್ಲೀಸ್‌ ನನ್ನ ಈ ಅಂತಿಮ ಇಚ್ಛೆ ಈಡೇರಿಸಿ…’

    ಹುಡುಗಿಯರ ಮೈಮೇಲೆ ಯಾವುದೇ ಗಾಯಗಳಿಲ್ಲ. ಆದರೆ ಅವರು ಸಿಕ್ಕ ಹೊಲದಲ್ಲಿ ನೊರೆ ತುಂಬಿದ್ದನ್ನು ಗಮನಿಸಿದರೆ ವಿಷ ನೀಡಿರುವ ಪ್ರಸಂಗವಿರಬಹುದು ಎಂದು ಎಸ್ಪಿ ಆನಂದ್ ಕುಲಕರ್ಣಿ ಹೇಳಿದ್ದಾರೆ. ಯಾರೊಂದಿಗೂ ದ್ವೇಷ ಹೊಂದಿಲ್ಲದ ಕಾರಣ ಯಾರ ಮೇಲೂ ಅನುಮಾನವಿಲ್ಲ ಎಂದು ಮನೆಯವರು ತಿಳಿಸಿದ್ದಾರೆ ಎನ್ನಲಾಗಿದೆ.

    ಈ ನಿಗೂಢ ಘಟನೆಯ ಹೆಚ್ಚಿನ ತನಿಖೆಗೆ 6 ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶ್ವಾನ ದಳವನ್ನು ಕೂಡ ಕರೆಸಲಾಗಿದೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಫಲಿತಾಂಶ ಬಂದ ಮೇಲೆ ಸಾವಿನ ರಹಸ್ಯ ತಿಳಿಯಬಹುದಾಗಿದೆ.(ಏಜೆನ್ಸೀಸ್)

    VIDEO: ಪ.ಬಂಗಾಳದಲ್ಲಿ ಬಾಂಬ್‌ ದಾಳಿ: ಗಂಭೀರ ಗಾಯಗೊಂಡ ಸಚಿವ- ಸಿಸಿಟಿವಿಯಲ್ಲಿ ಸೆರೆ

    ನಡುರಸ್ತೆಯಲ್ಲಿಯೇ ವಕೀಲ ದಂಪತಿಯ ಬರ್ಬರ ಹತ್ಯೆ: ವಿಡಿಯೋದಲ್ಲಿ ಭಯಾನಕ ದೃಶ್ಯ ದಾಖಲು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts