More

    ಅಪರೂಪದಲ್ಲೇ ಅಪರೂಪ…ದಿನಕ್ಕೆ 12,000 ಬಾರಿ ಸೀನುವ ಯುವತಿ

    ನವದೆಹಲಿ: ಸೀನುವುದು ನಾವು ನೋಡಿರುವಂತೆ ಯಾವ ದೊಡ್ಡ ಖಾಯಿಲೆ ಅಲ್ಲ ಮನುಷ್ಯ ಸೇರಿದಂತೆ ಪ್ರತಿಯೊಬ್ಬರಲ್ಲೂ ಇದು ಸಾಮಾನ್ಯವಾಗಿ ಇರುತ್ತದೆ. ಕೆಲವೊಮ್ಮೆ ಶೀತವಾದಾಗ, ಮನೆ ಕ್ಲೀನ್​ ಮಾಡುವ ವೇಳೆ ಬರುವ ಧೂಳಿನಿಂದ ಸೀನುವುದನ್ನು ನಾವು ನೋಡಿರುತ್ತೇವೆ. ಆದ್ದರಿಂದ ಸೀನುವುದನ್ನು ಯಾರು ಸಹ ಗಂಭೀರವಾಗಿ ಪರಿಗಣಿಸುವುದಿಲ್ಲ.

    ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 10ರಿಂದ 20ಬಾರಿ ಸೀನುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವತಿ ದಿನಕ್ಕೆ 12 ಸಾವಿರ ಬಾರಿ ಸೀನುವುದೇ ಈಕೆಯ ಪಾಲಿಗೆ ದೊಡ್ಡ ಖಾಯಿಲೆಯಾಗಿ ಪರಿಣಮಿಸಿದ್ದು, ಆಕೆಯ ನಿರಂತರ ಸೀನುವಿಕೆಗೆ ವೈದ್ಯರು ಈವರೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ತಿಳಿದು ಬಂದಿದೆ.

    ಅಮೆರಿಕದ ಟೆಕ್ಸಾಸ್ ನಿವಾಸಿ ಕ್ಯಾಟ್ಲಿನ್​ ಥಾರ್ನ್ಲಿ (20) ಎಂಬ ಯುವತಿಯೊಬ್ಬಳಿಗೆ ಸೀನುವಿಕೆಯೇ ದೊಡ್ಡ ಕಾಯಿಲೆಯಂತೆ ಪರಿಣಮಿಸಿದೆ. ಸಾಮಾನ್ಯವಾಗಿ ದಿನಕ್ಕೆ ಹತ್ತರಿಂದ ಹೆಚ್ಚೆದ್ದರೆ ಇಪ್ಪತ್ತು ಸಲ ಸೀನು ಬರಬಹುದು. ಆದರೆ ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ. ಕೈಟ್ಲಿನ್ ಕೆಲವೊಮ್ಮೆ ನಿದ್ದೆ ಮಾಡಲು ಸಾಧ್ಯವಾಗದಂತೆ ಇಡೀ ರಾತ್ರಿ ಸೀನುತ್ತಲೇ ಇರುತ್ತಾಳೆ.

    Sneeze

    ಇದನ್ನೂ ಓದಿ: ಕೆಲ ನಾಯಿ-ನರಿಗಳಿಂದ ಸಮಸ್ಯೆಯಾಗಿದೆ; 2-3 ದಿನದ ಬಳಿಕ ನಿರ್ಧಾರ ಪ್ರಕಟಿಸುತ್ತೇನೆ: ವಿ. ಸೋಮಣ್ಣ

    ಈ ಸೀನುವಿಕೆ ನೋವಿನಿಂದ ಕೂಡಿರುತ್ತದೆಯಂತೆ.ನಿರಂತರ ಸೀನುವಿಕೆಯಿಂದ ಅವಳ ಇಡೀ ದೇಹವು ನಡುಗುತ್ತದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ತನ್ನ ಸಮಸ್ಯೆಯು ಆರಂಭಿಕ ಹಂತದಲ್ಲಿದ್ದಾಗ, ಸೀನುವಿಕೆಯು ಯಾವುದೋ ಅಲರ್ಜಿಯಿಂದ ಉಂಟಾಗಿರಬಹುದು ಅಥವಾ ಮೂಗಿಗೆ ಏನಾದರೂ ತೊಂದರೆಯಾಗಿರಬಹುದು. ಈ ಸಮಸ್ಯೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಅವಳು ಭಾವಿಸಿದ್ದಳು.

    ಸೀನು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಒಂದು ನಿಮಿಷದಲ್ಲಿ 20 ಬಾರಿ ಸೀನುವ ಈಕೆ, ಕೆಲವೊಮ್ಮೆ ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳೆ. ಅವಳ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದರೆ ಸರಿಯಾಗಿ ತಿನ್ನಲು ಮತ್ತು ಕುಡಿಯಲು ಆಗದೆ ಸಮಸ್ಯೆಯಾಗುತ್ತಿದೆ. ವೈದ್ಯರು ಆಕೆಯ ವಿಚಿತ್ರವಾದ ಸೀನುವಿಕೆಯ ಸ್ಥಿತಿ ಮತ್ತು ಅದರ ಕಾರಣ ತಿಳಿಯಲು ಪ್ರಯತ್ನಿಸಿದ್ದರು. ಆಕೆಯನ್ನು ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಸೀನುವಿಕೆಗೆ ಕಾರಣವನ್ನು ಕಂಡುಹಿಡಿಯಲು ಆಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts