More

    ಮತ್ತೆ 14 ಜನರಲ್ಲಿ ಕರೊನಾ ಸೋಂಕು

    ಯಾದಗಿರಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಿದ್ದು, ಮಂಗಳವಾರ ಮತ್ತೆ 14 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕುಪೀಡಿತರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ.

    ಶಹಾಪುರ ತಾಲೂಕಿನ ಬೀರನಕಲ್ ತಾಂಡಾದ 20 ವರ್ಷದ ಮಹಿಳೆ (ಪಿ-2185), 25 ವರ್ಷದ ಪುರುಷ (ಪಿ-2186), ರಾಮುನಾಯ್ಕ ತಾಂಡಾದ 22 ವರ್ಷದ ಮಹಿಳೆ (ಪಿ-2187), ಸುರಪುರ ತಾಲೂಕಿನ ತಿಮ್ಮಾಪುರದ 25 ವರ್ಷದ ಪುರುಷ (ಪಿ-2188), ಬೀರನಾಳ ತಾಂಡಾದ 34 ವರ್ಷದ ಪುರುಷ (ಪಿ-2189), ಅರಿಕೇರಾ ತಾಂಡಾದ 15 ವರ್ಷದ ಬಾಲಕ (ಪಿ-2190), 18 ವರ್ಷದ ಯುವಕ (ಪಿ-2201), 45 ವರ್ಷದ ಮಹಿಳೆ (ಪಿ-2202), 25 ವರ್ಷದ ಮಹಿಳೆ (ಪಿ-2191), 32 ವರ್ಷದ ಪುರುಷ (ಪಿ-2192), 16 ವರ್ಷದ ಬಾಲಕಿ (ಪಿ-2197), 6 ವರ್ಷದ ಬಾಲಕ (ಪಿ-2198), 25 ವರ್ಷದ ಮಹಿಳೆ (ಪಿ-2199), ಮೋಟನಳ್ಳಿ ತಾಂಡಾದ 19 ವರ್ಷದ ಯುವಕ (ಪಿ-2200) ಸೋಂಕಿಗೆ ತುತ್ತಾಗಿದ್ದಾರೆ.

    ಇವರೆಲ್ಲರೂ ಅಂತಾರಾಜ್ಯ ಪ್ರಯಾಣ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ. ಪಿ-2192 ಮತ್ತು ಪಿ-2197ರ ವ್ಯಕ್ತಿಗಳು 11ರಂದು ಆಗಮಿಸಿದರೆ, ಉಳಿದ 12 ಜನ 12ರಂದು ಬಂದಿದ್ದಾರೆ.

    ಪಿ-2185, ಪಿ-2186, ಪಿ-2187, ಪಿ-2189 ಮತ್ತು ಪಿ-2190 ಸೋಂಕಿತರನ್ನು ಶಹಾಪುರದ ಬಾಲಕರ ಮೆಟ್ರಿಕ್ ನಂತರ ವಸತಿನಿಲಯ ಕ್ವಾರಂಟೈನ್ ಕೇಂದ್ರ, ಪಿ-2188 ವ್ಯಕ್ತಿಯನ್ನು ಸುರಪುರದ ಬಾಲಕರ ಮೆಟ್ರಿಕ್ ನಂತರ ವಸತಿನಿಲಯ ಕ್ವಾರಂಟೈನ್ ಕೇಂದ್ರ, ಉಳಿದ 8 ಜನರನ್ನು ಬೇವಿನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿನಿಲಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು.

    ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ, ಟಿಶ್ಯೂ ಪೇಪರ್ ಬಳಸಬೇಕು. ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪಿನಿಂದ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು. ಗುಂಪು ಸೇರುವಿಕೆ ಮಾಡಬಾರದು. ಈ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಗೆ ಸಹಕರಿಸಬೇಕೆಂದು ಅಪರ ಡಿಸಿ ಪ್ರಕಾಶ್ ರಜಪೂತ್ ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts