More

    ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕೆಂದೇ ಕರೊನಾ ಅಂಟಿಸಿಕೊಂಡು ಪರಿತಪಿಸಿದ ಜರ್ಮನಿಯ ಮೇಯರ್​

    ನವದೆಹಲಿ: ಕರೊನಾ ವೈರಸ್​ ಎಂದ ಕೂಡಲೇ ಜನ ಮಾರು ದೂರು ಓಡಿ ಹೋಗುವ ಪರಿಸ್ಥಿತಿ ಇದೆ. ಆದರೆ, ಜರ್ಮನಿಯ ಬರ್ಲಿನ್​ನ ಮಿಟ್ಟೆಯ ಜಿಲ್ಲಾ ಮೇಯರ್​ ಸ್ಟೀಫನ್​ ವಾನ್​ ಡಸ್ಸೆಲ್​ (53) ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಕರೊನಾ ಸೋಂಕು ಅಂಟಿಸಿಕೊಂಡು ನಂತರ ಭಾರಿ ಪಡಿಪಾಟಲು ಅನುಭವಿಸಿದ್ದಾರೆ.

    ಶುಕ್ರವಾರ ರೇಡಿಯೋ ಸಂದೇಶ ನೀಡಿರುವ ಅವರು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಮುಂದೆಂದೂ ಕರೊನಾ ಕಾಡುವುದಿಲ್ಲ ಎಂಬ ಭಾವನೆ ನನ್ನದಾಗಿತ್ತು. ಒಂದೆರಡು ದಿನ ಅನಾರೋಗ್ಯದಿಂದ ಬಳಲಿದರೂ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುವ ಭರವಸೆ ನನ್ನದಾಗಿತ್ತು. ಹಾಗಾಗಿ ಬೇಕೆಂದೇ ಕರೊನಾ ಸೋಂಕು ಅಂಟಿಸಿಕೊಂಡೆ. ನನ್ನಿಂದ ಬೇರಾರಿಗೂ ಹರಡುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನನ್ನೆಲ್ಲ ಅನಿಸಿಕೆಗಳು ತಪ್ಪು ಎಂಬುದು ನಂತರ ಗೊತ್ತಾಯಿತು. ಇದೀಗ ನನ್ನ ಲಿವಿಂಗ್​ ಇನ್​ ಪಾರ್ಟನರ್​ಗೂ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

    ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚುದಿನ ಭಾರಿ ಅನಾರೋಗ್ಯದಿಂದ ಬಳಲಿದೆ. ಚಿಕಿತ್ಸೆ ಪಡೆಯುವಾಗ ಚಿತ್ರಹಿಂಸೆಯ ಅನುಭವವಾಗುತ್ತಿದೆ. ನಾನು ಈಗ ಚೇತರಿಕೆಯ ಹಾದಿಯಲ್ಲಿದ್ದೇನೆ. ಆದರೂ ನಾನು ಸಂಪೂರ್ಣ ಗುಣಮುಖನಾಗುವವರೆಗೂ ಸ್ವತಃ ಕ್ವಾರಂಟೈನ್​ಗೆ ಒಳಗಾಗಿರುತ್ತೇನೆ ಎಂದು ತಿಳಿಸಿದ್ದಾರೆ.

    ಸರಿದಾರಿಯಲ್ಲಿ ಸಾಗುತ್ತಿದೆ ಭಾರತದ ಕೋವಿಡ್​ 19 ಸಮರ, ವಿಶ್ವಬ್ಯಾಂಕ್​ ಹರ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts