More

    ಮೈನಸ್ 7.5ಕ್ಕೆ ಜಿಡಿಪಿ; ಕಳೆದ ತ್ರೖೆಮಾಸಿಕಕ್ಕಿಂತ ತುಸು ಚೇತರಿಕೆ, ಆರ್ಥಿಕ ಸುಧಾರಣೆ ಭರವಸೆ..

    ನವದೆಹಲಿ: ಕರೊನಾ ದುಷ್ಪರಿಣಾಮಗಳು ಮತ್ತು ಲಾಕ್​ಡೌನ್ ಕಾರಣಕ್ಕೆ ಮೈನಸ್ 23.9ಕ್ಕೆ ಕುಸಿದು ಆತಂಕ ಮೂಡಿಸಿದ್ದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಜುಲೈ-ಸೆಪ್ಟೆಂಬರ್ ತ್ರೖೆಮಾಸಿಕದಲ್ಲಿ ತುಸು ಸುಧಾರಿಸಿಕೊಳ್ಳುವ ಮೂಲಕ ಆಶಾಭಾವ ಮೂಡಿಸಿದೆ. ಜಿಡಿಪಿ ಈಗ ಮೈನಸ್ 7.5ಗೆ ಬಂದಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಂಕಿಅಂಶ ತಿಳಿಸಿದೆ. ಈ ಮೂಲಕ ಮುಂದಿನ ತ್ರೖೆಮಾಸಿಕದಲ್ಲಿ ಜಿಡಿಪಿ ಧನಾತ್ಮಕವಾಗುವ ಭರವಸೆ ಮೂಡಿಸಿದೆ. ಆರ್ಥಿಕ ಪ್ರಗತಿ ಪ್ರಮಾಣ ಕಳೆದ ತ್ರೖೆಮಾಸಿಕಕ್ಕಿಂತ ಸ್ವಲ್ಪ ಸುಧಾರಿಸಿದ್ದರೂ, ಸತತ ಎರಡನೇ ಅವಧಿಯಲ್ಲಿ ಕುಸಿತ ದಾಖಲಿಸಿದ್ದರಿಂದ ದೇಶ ಅಧಿಕೃತವಾಗಿ ಆರ್ಥಿಕ ಬಿಕ್ಕಟ್ಟಿನಲ್ಲೇ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟು ಮೌಲ್ಯ ಸೇರ್ಪಡೆ (ಗ್ರಾಸ್ ವ್ಯಾಲ್ಯೂ ಆಡೆಡ್-ಜಿವಿಎ) ಶೇಕಡ 7 ಕುಸಿತವಾಗಿದೆ. ಕರೊನಾ ಮಹಾಮಾರಿ ಹಾಗೂ ಲಾಕ್​ಡೌನ್​ನಿಂದಾಗಿ ಆರ್ಥಿಕ ಚಟುವಟಿಕೆಗಳು ಮಂಕಾಗಿ ಏಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ ಪಾತಾಳಕ್ಕೆ ಇಳಿದಿತ್ತು. ಉತ್ಪಾದನಾ ವಲಯದಲ್ಲಿ ಆಗಿರುವ ಗಣನೀಯ ಸುಧಾರಣೆ ಜಿಡಿಪಿ ಕುಸಿತ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.

    ಆರ್ಥಿಕ ಬಿಕ್ಕಟ್ಟು: ಸತತ ಎರಡು ತ್ರೖೆಮಾಸಿಕಗಳಲ್ಲಿ ಜಿಡಿಪಿ ಕುಸಿದರೆ ಅದು ಆರ್ಥಿಕ ಬಿಕ್ಕಟ್ಟು ಎನಿಸಿಕೊಳ್ಳುತ್ತದೆ. 1996ರಲ್ಲಿ ತ್ರೖೆಮಾಸಿಕ ಪದ್ಧತಿಯನ್ನು ಭಾರತ ಅಳವಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಸತತ ಎರಡು ತ್ರೖೆಮಾಸಿಕ ಋಣಾತ್ಮಕವಾಗಿದೆ. ಇತ್ತೀಚೆಗೆ ಪ್ರಕಟವಾಗಿದ್ದ ಆರ್​ಬಿಐನ ‘ನೌಕಾಸ್ಟ್’ ವರದಿಯಲ್ಲೂ, ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಸುಳಿವು ನೀಡಲಾಗಿತ್ತು. ಶುಕ್ರವಾರ ಬಿಡುಗಡೆ ಮಾಡಲಾದ ಅಂಕಿಅಂಶದಿಂದ ಭಾರತ ತಾಂತ್ರಿಕವಾಗಿ ‘ಆರ್ಥಿಕ ಬಿಕ್ಕಟ್ಟ’ನ್ನು ಪ್ರವೇಶಿಸಿದೆ. ಎರಡನೇ ತ್ರೖೆಮಾಸಿಕದಲ್ಲಿ ಶೇಕಡ 8.8 ಕುಸಿತ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕಿಂತಲೂ ಉತ್ತಮ ಸಾಧನೆ (ಶೇ. 7.5) ದಾಖಲಾಗಿದೆ. ಈ ವರ್ಷದಲ್ಲಿ ಶೇಕಡ 8.7 ಕುಸಿತ ದಾಖಲಾಗುವ ಸಾಧ್ಯತೆ ಇದ್ದು, ಇದು ನಾಲ್ಕು ದಶಕದಲ್ಲೇ ಕನಿಷ್ಠ ಜಿಡಿಪಿ ಆಗಲಿದೆ.

    ಲಸಿಕೆಯ ಭರವಸೆ: ಕರೊನಾ ಲಸಿಕೆ ವಿಚಾರದಲ್ಲಿ ಪ್ರಗತಿಯಾಗಿರು ವುದರಿಂದ ಗ್ರಾಹಕ ಬೇಡಿಕೆಗಳು ಹೆಚ್ಚುವ ನಿರೀಕ್ಷೆ ಇದೆ. ಆರ್ಥಿಕತೆ ಮುಂದಿನ ವರ್ಷದ ಆರಂಭದ ಅವಧಿಯಲ್ಲಿ ಸುಧಾರಿಸುವ ಆಶಾವಾದವಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಆರ್​ಬಿಐ ಗವರ್ನರ್ ಹೇಳಿದ್ದೇನು?: ಲಾಕ್​ಡೌನ್​ನಿಂದ ಉಂಟಾದ ಹಿನ್ನಡೆ ನಿವಾರಣೆಯಾಗಿ ನಿರೀಕ್ಷೆಗಿಂತ ವೇಗವಾಗಿ ದೇಶದ ಆರ್ಥಿಕತೆ ಸುಧಾರಣೆಯ ಪಥದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಹೇಳಿದ್ದರು. ಆರ್ಥಿಕತೆಯ ಪುನಶ್ಚೇತನಕ್ಕೆ ಹಣಕಾಸಿನ ನೆರವು ಮುಂದುವರಿಸುವ ಸುಳಿವು ನೀಡಿದ್ದರು.

    ಏರಿಕೆ ಕಾಯ್ದುಕೊಂಡ ಕೃಷಿ: ಕರೊನಾ ಹಿನ್ನೆಲೆಯಲ್ಲಿ ಕಳೆದ ತ್ರೖೆಮಾಸಿಕದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಇಳಿಕೆ ಕಂಡುಬಂದಿದ್ದರೂ ಕೃಷಿ ಕ್ಷೇತ್ರ ಪ್ರಗತಿ ಕಂಡಿತ್ತು. ಶೇ. 3.4 ಏರಿಕೆ ದಾಖಲಿಸಿತ್ತು. ಈ ತ್ರೖೆಮಾಸಿಕದಲ್ಲೂ ಕೃಷಿ ಕ್ಷೇತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ. ಮುಂಗಾರು, ಹಿಂಗಾರು ಬಿತ್ತನೆ ಹೆಚ್ಚಾಗಿರುವುದು ಇದಕ್ಕೆ ಕಾರಣ.

    ಮೈನಸ್ 7.5ಕ್ಕೆ ಜಿಡಿಪಿ; ಕಳೆದ ತ್ರೖೆಮಾಸಿಕಕ್ಕಿಂತ ತುಸು ಚೇತರಿಕೆ, ಆರ್ಥಿಕ ಸುಧಾರಣೆ ಭರವಸೆ..

    ಕರೊನಾ ಸಾಂಕ್ರಾಮಿಕತೆಯಿಂದ ಆರ್ಥಿಕತೆ ಮೇಲೆ ಪರಿಣಾಮ ಆಗಿರುವುದರಿಂದ ಎಚ್ಚರಿಕೆ ಅಗತ್ಯವಾಗಿದೆ. ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಆರ್ಥಿಕತೆ ಚೇತರಿಕೆಯಾಗುತ್ತಿದೆ.

    | ಕೆ.ವಿ.ಸುಬ್ರಮಣಿಯನ್ ಮುಖ್ಯ ಆರ್ಥಿಕ ಸಲಹೆಗಾರ

    ದ್ವಿತೀಯ ತ್ರೖೆಮಾಸಿಕದ ಜಿಡಿಪಿ ಪ್ರಮಾಣ ನಿಜಕ್ಕೂ ಅಚ್ಚರಿಯ ವಿಚಾರ. ಭಾರತೀಯ ಆರ್ಥಿಕತೆ ವೇಗವಾಗಿ ಸುಧಾರಿಸಿಕೊಳ್ಳುತ್ತಿರುವ ಲಕ್ಷಣ ಇದಾಗಿದೆ.

    | ಸಂಗೀತಾ ರೆಡ್ಡಿ ಎಫ್​ಐಸಿಸಿಐ ಅಧ್ಯಕ್ಷೆ

    ಆತ್ಮನಿರ್ಭರವೂ ಕಾರಣ

    ಮೈನಸ್ 7.5ಕ್ಕೆ ಜಿಡಿಪಿ; ಕಳೆದ ತ್ರೖೆಮಾಸಿಕಕ್ಕಿಂತ ತುಸು ಚೇತರಿಕೆ, ಆರ್ಥಿಕ ಸುಧಾರಣೆ ಭರವಸೆ..

    ಆರ್ಥಿಕತೆ ಚೇತರಿಕೆಗೆ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಆತ್ಮನಿರ್ಭರ ಭಾರತ ಪ್ಯಾಕೇಜ್ ಪ್ರಕಟಿಸಿತ್ತು. ಈ ಸರಣಿಯಲ್ಲಿ ಇತ್ತೀಚೆಗೆ ಇನ್ನೊಂದು ಸುತ್ತಿನ ಪರಿಹಾರ ಕ್ರಮಗಳನ್ನು ಘೋಷಿಸಲಾಗಿದೆ. ಒಟ್ಟಾರೆ ಮೂರು ಆತ್ಮನಿರ್ಭರ ಪ್ಯಾಕೇಜ್ ಅನ್ವಯ ಒಟ್ಟು 29.98 ಲಕ್ಷ ಕೋಟಿ ರೂಪಾಯಿಗಳ ಯೋಜನೆಯನ್ನು ವಿವಿಧ ವಲಯಗಳಿಗೆ ಒದಗಿಸಲು ಸರ್ಕಾರ ಮುಂದಾಗಿದೆ. ಇದು ಜಿಡಿಪಿಯ ಶೇಕಡ 15ರಷ್ಟಾಗುತ್ತದೆ.

    • ಮೊದಲ ತ್ರೖೆಮಾಸಿಕಕ್ಕಿಂತ ಎರಡನೇ ತ್ರೖೆಮಾಸಿಕದಲ್ಲಿ ತುಸು ಸುಧಾರಿಸಿದ ಆರ್ಥಿಕತೆ
    • ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಳವಾದ ಕಾರಣ ವಹಿವಾಟು ಚೇತರಿಕೆ
    • ದೀಪಾವಳಿ ಮುಗಿದ ಹಿನ್ನೆಲೆಯಲ್ಲಿ ಬೇಡಿಕೆ ಕಡಿಮೆ ಯಾಗುವ ಸಾಧ್ಯತೆ ಇದೆ ಎಂದು ತಜ್ಞರ ಎಚ್ಚರಿಕೆ
    • ಜಿಎಸ್​ಟಿ ಸಂಗ್ರಹ, ಇ-ವೇ ಬಿಲ್, ಉತ್ಪಾದಕ ವಲಯದಲ್ಲಿ ಕಂಡುಬರುತ್ತಿರುವ ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts