More

    ತುಘಲಕ್​ ಅರವಿಂದ್​ ಕೇಜ್ರಿವಾಲ್​ಗೆ ಈಗ ಎಲ್ಲ ಕ್ರೆಡಿಟ್​ ಬೇಕಾಗಿದೆ: ಸಂಸದ ಗೌತಮ್​ ಗಂಭೀರ್​ ಅಸಮಾಧಾನ

    ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊವಿಡ್​-19 ನಿಯಂತ್ರಣವಾಗುತ್ತಿದೆ. ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ಈಗ ಇದೇ ವಿಚಾರಕ್ಕೆ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ಕೊವಿಡ್​-19 ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಈಗ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಇದರ ಸಂಪೂರ್ಣ ಕ್ರೆಡಿಟ್​ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗೌತಮ್​ ಗಂಭೀರ್​ ಆರೋಪಿಸಿದ್ದಾರೆ.
    ಅರವಿಂದ್ ಕೇಜ್ರಿವಾಲ್​ ಅವರನ್ನು ತುಘಲಕ್​ ಎಂದು ಕರೆದಿರುವ ಗೌತಮ್​ ಗಂಭೀರ್​, ದೆಹಲಿಯಲ್ಲಿ ಕೊವಿಡ್​ ಪರಿಸ್ಥಿತಿ ಸುಧಾರಿಸುತ್ತಿದೆ. ತುಘಲಕ್​ ಅರವಿಂದ್ ಕೇಜ್ರಿವಾಲ್​ ಹಾಗೂ ಆಪ್ ಪಕ್ಷ ಪ್ರತಿ ತಾಸಿಗೊಮ್ಮೆ ದೆಹಲಿಯ ಕೊವಿಡ್​-19 ಪರಿಸ್ಥಿತಿ ಬಗ್ಗೆ ವಿವರಿಸಿ ಟ್ವೀಟ್​ ಮಾಡುತ್ತಿದೆ. ಈ ಮೂಲಕ ಎಲ್ಲವನ್ನೂ ತಾವೇ ನಿಭಾಯಿಸುತ್ತಿದ್ದೇವೆ ಎಂದು ಮನ್ನಣೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಉಪಮುಖ್ಯಮಂತ್ರಿಯವರು ದೆಹಲಿಯಲ್ಲಿ ಜುಲೈ ಅಂತ್ಯದ ವೇಳೆಗೆ ಕೊವಿಡ್​-19 ಸೋಂಕಿತರ ಸಂಖ್ಯೆ 5.5 ಲಕ್ಷಕ್ಕೆ ಏರುತ್ತದೆ ಎಂದು ಯಾವ ಕಾರಣಕ್ಕೆ ಹೇಳಿದ್ದರು? ಕೇಂದ್ರ ಸಹಾಯಕ್ಕೆ ಬರಲಿ ಎಂದೇ ಹೀಗೆ ಹೇಳಿಕೆ ನೀಡಿದ್ದರಾ? ಎಂದು ಗಂಭೀರ್​ ಪ್ರಶ್ನಿಸಿದ್ದಾರೆ.

    ಇಂದು ಟ್ವೀಟ್​ ಮಾಡಿದ್ದ ಆಪ್, ದೆಹಲಿಯಲ್ಲಿ ಕರೊನಾ ವಿರುದ್ಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ. ಜನರೂ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಇದುವರೆಗೆ ಒಟ್ಟು 84, 694 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಟ್ವೀಟ್​ ಮಾಡಿತ್ತು.

    ದೆಹಲಿಯಲ್ಲಿ ಒಟ್ಟು 1,09,140 ಮಂದಿ ಕರೊನಾ ಸೋಂಕಿತರು ಇದ್ದು, 3,300 ಜನರು ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

    ‘ನನಗೆ ಕರೊನಾ ಲಕ್ಷಣಗಳಿಲ್ಲ…ಕ್ಷೇಮವಾಗಿದ್ದೇನೆ…’: ಸಚಿವ ಸಿ.ಟಿ.ರವಿ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts