More

    ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ

    ಮುಳಬಾಗಿಲು: ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚನೆ ಮೇರೆಗೆ ಶನಿವಾರ ಮತ್ತು ಭಾನುವಾರ ತಹಸೀಲ್ದಾರ್ ಕೆ.ಎನ್. ರಾಜಶೇಖರ್ ನೇತೃತ್ವದಲ್ಲಿ ತಾಲೂಕು ಆಡಳಿತ ತಾಲೂಕಿನ ವಿವಿಧ ಕಡೆ ದಾಳಿ ಮಾಡಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದ್ದಾರೆ.

    ತಾಲೂಕಿನ ಆವಣಿ, ಭಟ್ಲಭಾವನಹಳ್ಳಿ, ಓಬಳರಾಯನಬಂಡೆ, ಕದರೀಪುರ, ಮುಳಬಾಗಿಲಿನ ಅಂಜನಾದ್ರಿ ಬೆಟ್ಟ, ಕೃಷ್ಣಗಿರಿ ಬಂಡೆ ಮತ್ತು ಬೆಟ್ಟ ಗುಡ್ಡಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಗಣಿಗಾರಿಕೆ ಮಾಡಿ ತೆರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ತಡೆಗೆ ಡಿಸಿ ಸೂಚನೆ ನೀಡಿದ್ದರು.

    ಕದರೀಪುರ ಬಂಡೆಯಲ್ಲಿ 1 ಕಲ್ಲು ತುಂಬಿದ ಲಾರಿಯನ್ನು ಅಧಿಕಾರಿಗಳು ವಶಪಡಿಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ದಂಡ ವಿಧಿಸಲು ಸೂಚನೆ ನೀಡಿದ್ದಾರೆ. ಅವಣಿ ಆರ್‌ಐ ಸಿ.ಸುಬ್ರಹ್ಮಣಿ, ಸರ್ವೇ ಅಧಿಕಾರಿ ಪುಟ್ಟಸ್ವಾಮಿ ಸೇರಿ ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಸಚಿವ ನಾಗೇಶ್‌ಗೆ ಮನವಿ: ತಾಲೂಕು ಆಡಳಿತ ಅಕ್ರಮ ಬಂಡೆ ಗಣಿಗಾರಿಕೆ ಮೇಲೆ ದಾಳಿ ಮಾಡುತ್ತಿದ್ದಂತೆ ಸಚಿವ ಎಚ್. ನಾಗೇಶ್‌ಗೆ ಬಂಡೆ ಮಾಲೀಕರು ಮತ್ತು ಕಲ್ಲುಬಂಡೆ ಕಾರ್ಮಿಕರ ನಿಯೋಗ ಜೆಡಿಎಸ್ ಮುಖಂಡ ಆವಣಿ ಎಂ.ಆರ್.ನಾಗಭೂಷಣ್ ಬಾಬು ಸಚಿವರ ಆಪ್ತ ಬಳಗದ ಮುಖಂಡ ಆವಣಿ ವಿಜಯ್‌ಕುಮಾರ್ ನೇತೃತ್ವದಲ್ಲಿ ಸಚಿವರಿಗೆ ಮನವಿ ಮಾಡಿ ಬಂಡೆಗಳಲ್ಲಿ ಹಲವಾರು ವರ್ಷಗಳಿಂದ ಕಲ್ಲು ಕೀಳುವ ಕೆಲಸದ ಮೂಲಕ ಸಾವಿರಾರು ಕಾರ್ಮಿಕರು ಜೀವನ ಮಾಡುತ್ತಿದ್ದು ಇದನ್ನು ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts