More

    ಶಿಕ್ಷಕರು ಪಠ್ಯಕ್ರಮಕ್ಕೆ ಸೀಮಿತವಾಗದಿರುವಂತೆ ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ ಸಲಹೆ

    ಗಂಗಾವತಿ: ಶಿಕ್ಷಕರ ಪಠ್ಯಕ್ರಮಕ್ಕೆ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದ ಸಾಧನೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಿದೆ ಎಂದು ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.

    ನಗರದ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಡಾ.ಡಿ.ಎಲ್. ನರಸಿಂಹಾಚಾರ್ ದತ್ತಿನಿಧಿ ನಿಮಿತ್ತ ಹಂಪಿ ವಿವಿ ಹಸ್ತಪ್ರತಿಶಾಸ ವಿಭಾಗ, ಕಸಾಪ ತಾಲೂಕು ಘಟಕ ಮತ್ತು ಕನ್ನಡ ಭಾಷಾ ಬೋಧಕರ ವೇದಿಕೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಹಳಗನ್ನಡ ಸಾಹಿತ್ಯ ಬೋಧನ ಶಿಬಿರದಲ್ಲಿ ಮಾತನಾಡಿದರು. ಸಾಹಿತ್ಯ ಕೃಷಿ ಮನುಷ್ಯನ ಸಾಧನೆಗೆ ಪೂರಕವಾಗಿದ್ದು, ವಿದ್ವಾಂಸರ ಕೃತಿಗಳ ಬಗ್ಗೆ ಅಧ್ಯಯನದ ಕಾರ್ಯವಾಗಬೇಕಿದೆ. ಮಕ್ಕಳಿಗೆ ಸಂಸ್ಕಾರ, ಪರಿಸರ ಮತ್ತು ಸಂಸ್ಕೃತಿ ತಿಳಿ ಹೇಳುವ ಕೆಲಸವಾಗಬೇಕಿದೆ. ಪಠ್ಯಕ್ರಮದ ಜತೆಗೆ ಕನ್ನಡ ಭಾಷೆ ಮತ್ತು ಹಳಗನ್ನಡದ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

    ಹಂಪಿ ವಿವಿ ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ, ಹಳಗನ್ನಡವನ್ನು ಗಮಕಗಳ ಮೂಲಕ ಜನರಿಗೆ ತಲುಪಿಸಬೇಕಿದ್ದು, ನಾಟಕ, ಬಯಲಾಟ ಮತ್ತು ಯಕ್ಷಗಾನಗಳಲ್ಲಿ ಹಳಗನ್ನಡ ಪ್ರಚಲಿತದಲ್ಲಿದೆ ಎಂದರು.

    ಶಿಬಿರ ಉದ್ಘಾಟಿಸಿದ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ್ ಬೋಲಾ ಮಾತನಾಡಿ, ಇತ್ತೀಚಿಗೆ ಶುರುವಾದ ಆನ್‌ಲೈನ್ ಪಾಠದಿಂದ ಮಕ್ಕಳು ಓದಿನಿಂದ ವಿಮುಖರಾಗುತ್ತಿದ್ದು, ಮೊಬೈಲ್ ಆಟದ ಮೂಲಕ ವಿಷಯಗಳನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.

    ನಾಲ್ಕು ದಿನದ ಶಿಬಿರದಲ್ಲಿ 38 ಶಿಕ್ಷಕರು ಭಾಗವಹಿಸಿದ್ದಾರೆ. ಹಸ್ತಪ್ರತಿ ಶಾಸವಿಭಾಗದ ಮುಖ್ಯಸ್ಥ ಡಾ.ಎ್.ಟಿ.ಹಳ್ಳಿಕೇರಿ, ಬಿಇಒ ಸೋಮಶೇಖರಗೌಡ, ಕಸಾಪ ರಾಜ್ಯ ಸಮಿತಿ ಸದಸ್ಯ ಶೇಖರಗೌಡ ಮಾಲಿ ಪಾಟೀಲ್, ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ, ತಾಲೂಕು ಅಧ್ಯಕ್ಷ ಎಸ್.ಬಿ.ಗೊಂಡಬಾಳ್, ವೇದಿಕೆ ಜಿಲ್ಲಾ ಅಧ್ಯಕ್ಷ ಕಳಕಪ್ಪ ಅಂಗಡಿ ಇತರರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಶ್ರೀನಿವಾಸ ಅಂಗಡಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts