More

    ಪಿರಾಮಿಡ್ ಕ್ಯೂಬ್ ಜೋಡಣೆಯಲ್ಲಿ ಸಾಧನೆ- ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ವಂಡರ್ ಬುಕ್ ಆಪ್ ರೆಕಾರ್ಡ್ಸ್ ಪ್ರಶಸ್ತಿ

    ಗಂಗಾವತಿ: ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪಿರಾಮಿಡ್ ಕ್ಯೂಬ್ ಜೋಡಣೆಯಲ್ಲಿ ವಂಡರ್ ಬುಕ್ ಆಪ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದ್ದು, ಸೋಮವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ವಂಡರ್ ಬುಕ್ ಆ್ ರೆಕಾರ್ಡ್ಸ್ ಇಂಟರ್‌ನ್ಯಾಷನಲ್ ತಂಡ, ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಏಕಕಾಲಕ್ಕೆ 999 ವಿದ್ಯಾರ್ಥಿಗಳು 57 ಸೆಕೆಂಡ್‌ನಲ್ಲಿ ಒಂದೇ ಬಣ್ಣದತ್ತ ಪಿರಾಮಿಡ್ ಜೋಡಣೆ ಮಾಡಬೇಕಿತ್ತು. ಅದರಂತೆ ವಿದ್ಯಾರ್ಥಿಗಳು ಕ್ಯೂಬ್ ಆಕಾರದಲ್ಲಿ ಕುಳಿತು ನಿಗದಿತ ವೇಳೆಗೆ ಜೋಡಣೆ ಮಾಡಿದ್ದು, ವಂಡರ್ ಬುಕ್ ಆ್ ರೆಕಾರ್ಡ್ಸ್ ಮುಖ್ಯ ಸಂಯೋಜಕ ಬಿಂಗಿ ನರೇಂದ್ರಗೌಡ ನೇತೃತ್ವದ ತಂಡ ಸಾಧನೆಯನ್ನು ದಾಖಲಿಸಿಕೊಂಡಿತ್ತು. ಪಿರಾಮಿಡ್ ಕ್ಯೂಬ್ ಜೋಡಣೆಯನ್ನು ಸಿಸಿ ಮತ್ತು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಯಿತು. ಆಯ್ಕೆ ತಂಡ ಸಮಯ ನಿಗದಿ ಜತೆಗೆ ಒಂದೇ ಬಣ್ಣದತ್ತ ಬಂದಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ದಾಖಲೆ ೋಷಿಸಿತು. ಇದಕ್ಕೆ ಪಾಲಕರು ಮತ್ತು ಆಸಕ್ತರು ಸಾಕ್ಷಿಯಾದರು.

    ರೆಕಾರ್ಡ್ಸ್‌ನಲ್ಲಿ ದಾಖಲಾಗುತ್ತಿದ್ದಂತೆ ವಿದ್ಯಾರ್ಥಿಗಳು ಮೈದಾನದಲ್ಲಿ ಸಂಭ್ರಮಿಸಿದ್ದು, ಸಾಧನೆ ಪ್ರಶಸ್ತಿ ಪದಕ ಮತ್ತು ಪ್ರಮಾಣ ಪತ್ರವನ್ನು ಶ್ರೀವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬುರಿಗೆ ವಿತರಿಸಲಾಯಿತು.

    ಈ ಬಗ್ಗೆ ನೆಕ್ಕಂಟಿ ಸೂರಿಬಾಬು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೂಕ್ತ ಅವಕಾಶಗಳು ಹಾಗೂ ಮಾರ್ಗದರ್ಶನ ಲಭಿಸಿದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯ ಬಲ್ಲರು ಎಂಬುವದನ್ನು ಶಾಲೆಯ ವಿದ್ಯಾರ್ಥಿಗಳು ನಿರೂಪಿಸಿದ್ದು, ಮಾರ್ಗದರ್ಶನ ನೀಡಿದ ಶಿಕ್ಷಕರು ಮತ್ತು ಪಾಲಕರು ಪ್ರೇರಕರು ಎಂದರು. ಆಡಳಿತಾತ್ಮಕ ನಿರ್ದೇಶಕ ಎಚ್.ಕೆ.ಚಂದ್ರಮೋಹನ್, ಶೈಕ್ಷಣಿಕ ನಿರ್ದೇಶಕ ಶ್ರೀನಿವಾಸ್ ಚೌದರಿ, ಸಂಯೋಜಕ ವಿಜಯಭಾಸ್ಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts