More

    ಹುತಾತ್ಮ ಯೋಧರಿಗೆ ಮೌನ ನಮನ

    ಗಂಗಾವತಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣೆ ಹಿನ್ನೆಲೆಯಲ್ಲಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಅಖಿಲ ಕರ್ನಾಟಕ ಅರಕ್ಷಕರ ಅಭಿಮಾನಿಗಳ ಬಳಗದಿಂದ ದೀಪ ಪ್ರಜ್ವಲನ ಶ್ರದ್ಧಾಂಜಲಿ ಸಭೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ವೀರ ಯೋಧರ ಭಾವಚಿತ್ರಕ್ಕೆ ನಮನದೊಂದಿಗೆ ಮೌನಾಚರಣೆ ಸಲ್ಲಿಸಲಾಯಿತು.

    ಡಿವೈಎಸ್ಪಿ ಎಚ್.ಶೇಖರಪ್ಪ ಮಾತನಾಡಿ, ವೀರಯೋಧರ ತ್ಯಾಗಬಲಿದಾನ ಸ್ಮರಣೀಯವಾಗಿದ್ದು, ೆ.14 ಕರಾಳ ದಿನವೆಂದು ಪರಿಗಣಿಸಲಾಗುತ್ತಿದೆ ಎಂದರು. ಗ್ರಾಮೀಣ ಠಾಣೆ ಪಿಐ ಎನ್.ಮಂಜುನಾಥ, ಕಾರಟಗಿ ಪಿಐ ಎಚ್.ಎಂ. ಸಿದ್ರಾಮಯ್ಯಸ್ವಾಮಿ, ಕುಷ್ಟಗಿ ಪಿಐ ನಿಂಗಪ್ಪ, ಕನಕಗಿರಿ ಪಿಐ ಜಗದೀಶ್, ಬಳಗದ ಪದಾಧಿಕಾರಿಗಳಾದ ಈಶ್ವರ, ಕೆ.ಎಂ.ಶರಣಯ್ಯಸ್ವಾಮಿ, ಸುನೀಲ್, ಶರಣಪ್ಪ, ನಿತೀನ್ ಇತರರಿದ್ದರು.

    ಕೆಆರ್‌ಪಿಪಿ: ನಗರದ ಕಲ್ಯಾಣ ರಾಜ್ಯಪ್ರಗತಿ ಪಕ್ಷದ ಕಚೇರಿಯಲ್ಲಿ ವಿವಿಧ ಘಟಕಗಳಿಂದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು ಮಾತನಾಡಿದರು. ನಗರ ಘಟಕದ ಅಧ್ಯಕ್ಷ ವೀರೇಶ ಬಲ್ಕುಂದಿ, ಗ್ರಾಮೀಣ ಘಟಕದ ಅಧ್ಯಕ್ಷ ಡಿ.ಕೆ.ಆಗೋಲಿ, ಪದಾಧಿಕಾರಿಗಳಾದ ಚನ್ನವೀರನಗೌಡ ಆರಾಳ್, ವೀರೇಶ ಹೊಸಳ್ಳಿ, ರಾಜೇಶ ರೆಡ್ಡಿ, ರಾಜು ದಲಭಂಜನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts