More

    ರಾಜಕೀಯ, ಶಿಕ್ಷಣ, ಕ್ರೀಡೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ- ತಾಪಂ ಇಒ ಮಹಾಂತಗೌಡ ಪಾಟೀಲ್ ಹೇಳಿಕೆ

    ಗಂಗಾವತಿ: ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆಗಳು ಪೂರಕವಾಗಿದ್ದು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ತಾಪಂ ಇಒ ಮಹಾಂತಗೌಡ ಪಾಟೀಲ್ ಹೇಳಿದರು.

    ನಗರದ ಕನಕಗಿರಿ ರಸ್ತೆಯ ಬಸಲಿಂಗಪ್ಪ ವೀರಶೆಟ್ಟಿ ಹಿ.ಪ್ರಾ.ಶಾಲೆ ಮೈದಾನದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ ಮಹಿಳೆಯರಿಗಾಗಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜಕೀಯ, ಶಿಕ್ಷಣ, ಕ್ರೀಡೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕಿದೆ. ಮಹಿಳೆಯರು ಸರಕಾರಿ ಸೌಲಭ್ಯಗಳೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು. 8 ಓವರ್‌ಗಳ ಪಂದ್ಯಾವಳಿಯಲ್ಲಿ ಮಹಿಳೆಯರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಗಮನಸೆಳೆದಿದ್ದು, ವಿಕೆಟ್ ಬಿದ್ದಾಗ, ಬೌಂಡರಿ ಹೊಡೆದಾಗ ಮಹಿಳೆಯರು ಕೇಕೆ ಹಾಕಿ, ಕುಣಿದು ಕುಪ್ಪಳಿಸಿದರು. ವಿಜೇತ ತಂಡಕ್ಕೆ ಪಾರಿತೋಷಕ ನೀಡಿ ಗೌರವಿಸಲಾಯಿತು.

    ವಿವಿಧ ಗ್ರಾಪಂ ಪಿಡಿಒಗಳಾದ ಬಸವರಾಜ ನಾಯಕ, ಮಲ್ಲಿಕಾರ್ಜುನ ಕಡಿವಾಳ, ಮಹ್ಮದ್ ಜುಬೇರ್ ನಾಯ್ಕ, ವತ್ಸಲಾ, ಶರಣಮ್ಮ, ಕೆ. ಕಷ್ಣಪ್ಪ, ವಿದ್ಯಾವತಿ, ಇಂದಿರಾ, ಕಿರಣ್ ಕುಮಾರ, ಕಷ್ಣ, ರವಿಶಾಸ್ತ್ರಿ, ಲಕ್ಷ್ಮೀದೇವಿ,ತಾಪಂ ಸಿಬ್ಬಂದಿಯಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts