More

    ವೈಜ್ಞಾನಿಕ ಮನೋಭಾವದಿಂದ ಮೂಢನಂಬಿಕೆ ದೂರ; ನಗರಸಭೆ ಸದಸ್ಯ ಉಮೇಶ ಸಿಂಗನಾಳ್ ಅಭಿಮತ

    ಗಂಗಾವತಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಿದಾಗ ಮೂಢನಂಬಿಕೆ, ಕಂದಾಚಾರ, ಅಂಧಶ್ರದ್ಧೆಗಳು ದೂರಾಗುತ್ತವೆ ಎಂದು ನಗರಸಭೆ ಸದಸ್ಯ ಉಮೇಶ ಸಿಂಗನಾಳ್ ಹೇಳಿದರು.

    ನಗರದ ಇಸ್ಲಾಂಪುರ ಸ.ಪ್ರೌ.ಶಾಲೆಯಲ್ಲಿ ವಿಜ್ಞಾನ ತಂತ್ರಜ್ಞಾನ ಇಲಾಖೆ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ ಮತ್ತು ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಜಿಲ್ಲೆಯಿಂದ ಆಯ್ಕೆಯಾದ ಶಿಬಿರದ ವರದಿ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಯೋಜನೆಗಳನ್ನು ಶಿಕ್ಷಕರು ಹಮ್ಮಿಕೊಳ್ಳಬೇಕಿದ್ದು, ಹೊಸ ಅವಿಷ್ಕಾರಗಳಿಗೆ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದರು.

    ಸಮಾವೇಶದ ಜಿಲ್ಲಾ ಸಂಯೋಜಕ ಸಿದ್ದಲಿಂಗೇಶ ಪೂಲಭಾವಿ ಮಾತನಾಡಿ, ಜಿಲ್ಲೆಯಿಂದ 3 ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಆಯ್ಕೆಯಾದ ಶಾಲೆಗಳಿಗೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸಹಾಯಧನ ಯೋಜನೆಯಡಿ 5 ಸಾವಿರ ರೂ. ಪಡೆಯಲು ಅವಕಾಶವಿದೆ ಎಂದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

    ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ವಸದ್, ಮುಖ್ಯಶಿಕ್ಷಕ ಎಚ್.ಎಸ್.ಸೋಮಶೇಖರ್, ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಈರಣ್ಣ ಹೆಬ್ಬಾಳ್, ವಿಜ್ಞಾನ ಸಂಘದ ತಾಲೂಕಾಧ್ಯಕ್ಷ ಉಮೇಶ, ಸಂಪನ್ಮೂಲ ಶಿಕ್ಷಕಿ ಜಯಶ್ರೀ ಅಂಗಡಿ, ಶಿಕ್ಷಕರಾದ ಜಯಶ್ರೀ ಹಕ್ಕಂಡಿ, ಎಸ್.ಕೆ.ಝಡ್. ಮೊಹಿದ್ದೀನ್, ಸೋಫಿಯಾಬೇಗಂ, ಶಶಿಭೂಷಣ, ಎನ್.ಜಯಲಕ್ಷ್ಮೀ, ಭೀಮಪ್ಪ ಕೋಳೂರು, ಅಬ್ದುಲ್ ನಬೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts