More

    ಡಿ.20ರಿಂದ ನಾಲ್ಕು ದಿನ ಗಂಗಾವತಿ ಗ್ರಾಮದೇವತೆ ಜಾತ್ರೆ: ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

    ಗಂಗಾವತಿ: ಎಲ್ಲ ಸಮುದಾಯಗಳ ವಿಶ್ವಾಸದೊಂದಿಗೆ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರೋತ್ಸವ ಅದ್ದೂರಿಯಾಗಿ ಆಚರಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಶ್ರೀ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ವ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಡಿ.20ರಿಂದ ನಾಲ್ಕು ದಿನ ನಡೆಯುವ ಜಾತ್ರೋತ್ಸವಕ್ಕೆ ಇಲಾಖೆ ಅಧಿಕಾರಿಗಳು ಸಹಕರಿಸುವಂತೆ ಸೂಚನೆ ನೀಡಿದ್ದು, ನೈರ್ಮಲೀಕರಣ, ಕುಡಿವ ನೀರು ಮತ್ತು ಸೂಕ್ತ ಬಂದೋಬಸ್ತ್ ಆಯೋಜಿಸುವಂತೆ ತಿಳಿಸಲಾಗಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ವಾಹನ ಪಾರ್ಕಿಂಗ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಹೇಳಲಾಗಿದೆ ಎಂದರು.

    ದೇವಾಸ್ಥಾನ ಮತ್ತು ಜಾತ್ರೋತ್ಸವದ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಐದು ವರ್ಷಕ್ಕೊಮ್ಮೆ ಜರುಗುವ ವಿಶೇಷ ಕಾರ್ಯಕ್ರಮದ ನಿಮಿತ್ತ ಡಿ.20ರಂದು ಪೂರ್ಣಕುಂಭ ಮೆರವಣಿಗೆ, 21ರಂದು ಶ್ರೀ ದುರ್ಗಾಸಪ್ತಶತಿ ಪಾರಾಯಣ, 22ರಂದು ನವಚಂಡಿ ಹೋಮ, ಶೋಭಾಯಾತ್ರೆ, 23ರಂದು ಜಾತ್ರೋತ್ಸವ ಜರುಗಲಿದೆ ಎಂದರು.

    ಮಾಜಿ ಸಂಸದ ಎಚ್.ಜಿ.ರಾಮುಲು, ಮಾಜಿ ಶಾಸಕರಾದ ಜಿ.ವೀರಪ್ಪ, ಎಚ್.ಎಸ್.ಮುರಳೀಧರ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ನಗರಸಭೆ ಮಾಜಿ ಅಧ್ಯಕ್ಷ ಕೆ.ಕೃಷ್ಣಪ್ಪ ನಾಯಕ, ಉದ್ಯಮಿಗಳಾದ ಕೆ.ಕಾಳಪ್ಪ, ರವೀಂದ್ರನಾಥ, ಕೆಲೋಜಿ ಶ್ರೀನಿವಾಸ ಶ್ರೇಷ್ಟಿ, ಜೋಗದ ಹನುಮಂತಪ್ಪ ನಾಯಕ, ಅನ್ನಪೂರ್ಣಸಿಂಗ್, ಗೀತಾ ವಿಕ್ರಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts