More

    ಆಹಾರ ಸುರಕ್ಷತೆ, ಗುಣಮಟ್ಟದಲ್ಲಿ ಎಚ್ಚರವಿರಲಿ: ಪ್ರಾಧಿಕಾರದ ಅಧಿಕಾರಿ ಡಾ.ಲಿಂಗರಾಜ್ ಸಲಹೆ

    ಗಂಗಾವತಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಚಾರದಲ್ಲಿ ವರ್ತಕರು ಎಚ್ಚರ ವಹಿಸಬೇಕಿದ್ದು, ಉದ್ಯಮ ಲೈಸೆನ್ಸ್ ಪಡೆಯುವ ಮೂಲಕ ಸರ್ಕಾರ ನಿಗದಿಪಡಿಸಿದ ಸಂಸ್ಥೆಯಿಂದ ಕಡ್ಡಾಯವಾಗಿ ತರಬೇತಿ ಪಡೆದುಕೊಳ್ಳುವಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಧಿಕಾರಿ ಡಾ.ಟಿ.ಲಿಂಗರಾಜ್ ತಿಳಿಸಿದರು.

    ನಗರದ ಶ್ರೀಕೃಷ್ಣ ಸಭಾಂಗಣದಲ್ಲಿ ಕೇಂದ್ರದ ಎ್ಎಸ್‌ಎಸ್‌ಎಐ, ರಾಜ್ಯದ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರ ಮತ್ತು ಗ್ಲೋಬಲ್ ಇನ್‌ಸ್ಟಿಟ್ಯೂಟ್ ಾರ್ ಎಜುಕೇಷನ್ ಆ್ಯಂಡ್ ರಿಸರ್ಚ್ ೌಂಡೇಷನ್ ಸಹಯೋಗದಲ್ಲಿ ವಿವಿಧ ವರ್ತಕರಿಗೆ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತ ತರಬೇತಿ ಪಡೆದ ನಂತರವೇ ವರ್ತಕರು ಉದ್ಯಮ ಆರಂಭಿಸಬೇಕು. ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ಕಳಪೆ ಗುಣಮಟ್ಟ, ಕಲುಷಿತ, ಅವಧಿ ಮೀರಿದ, ನಕಲಿ ಇತ್ಯಾದಿ ದೂರುಗಳು ಗ್ರಾಹಕರಿಂದ ಕೇಳಿ ಬಂದರೆ ದಂಡದೊಂದಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಬೀದಿ ಬದಿ ವ್ಯಾಪಾರಿಗಳು ಮತ್ತು ಗೂಡಂಗಡಿಗಳಿಗೆ ಪ್ರಾಧಿಕಾರದ ಕಾಯ್ದೆ ಅನ್ವಯವಾಗಲಿದೆ ಎಂದು ತಿಳಿಸಿದರು.

    ೌಂಡೇಷನ್ ಜಿಲ್ಲಾ ಸಂಯೋಜಕ ಜಿ.ವಿ. ಅನಿಲ್‌ಕುಮಾರ್ ಮಾತನಾಡಿ, ತರಬೇತಿಗಾಗಿ ವರ್ತಕರು ಆ್ ಮತ್ತು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಬಹುದಾಗಿದ್ದು, ಟ್ರೇನಿಂಗ್ ಪಡೆದವರಿಗೆ ಅರ್ಹತಾ ಪತ್ರ ನೀಡಲಾಗುವುದು. ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತರಬೇತಿ ಕೊಡಿಸುವಂತೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts