More

     ನಿರಂತರ ಚಿಕಿತ್ಸೆ ಪಡೆದರೆ ಕ್ಷಯರೋಗ ನಿವಾರಣೆ

    ಗಂಗಾವತಿ: ನಿರಂತರ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಕ್ಷಯರೋಗದಿಂದ ಮುಕ್ತರಾಗಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಪ್ಪ ಚಕೋಟಿ ಹೇಳಿದರು.

    ವಿಶ್ವ ಕ್ಷಯ ನಿರ್ಮೂಲನಾ ದಿನದ ನಿಮಿತ್ತ ನಗರದ ಇಸ್ಲಾಂಪುರದಲ್ಲಿ ಕ್ಷಯ ಮುಕ್ತ ಜಿಲ್ಲಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಕ್ಷಯರೋಗಿಗಳಿಗೆ ಉಚಿತ ಚಿಕಿತ್ಸೆ ಜತೆಗೆ ಪ್ರೋತ್ಸಾಹಧನದ ವ್ಯವಸ್ಥೆಯಿದೆ. ರೋಗ ಲಕ್ಷಣ ಕಂಡುಬಂದರೆ ಕೂಡಲೆ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು. ಕ್ಷಯ ರೋಗ ವಿಭಾಗದ ಮೇಲ್ವಿಚಾರಕ ಎಚ್.ಮಲ್ಲಿಕಾರ್ಜುನ ಮಾಹಿತಿ ನೀಡಿದರು. ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶಬ್ರಿನ್, ಕ್ಷಯ ರೋಗದ ಪರಿವೀಕ್ಷಕರಾದ ಹುಸೇನ್ ಬಾಷಾ, ಆಶಾಬೇಗಂ, ರಾಘವೇಂದ್ರ ಜೋಶಿ, ಡಿ.ಶ್ರೀನಿವಾಸ, ಕರ್ನಾಟಕ ಆರೋಗ್ಯ ಸಂವರ್ಧನೆ ಸಂಸ್ಥೆ ಪ್ರತಿನಿಧಿಗಳಾದ ಕಾಸಿಂಬಿ, ಹನುಮಂತಪ್ಪ, ಆರೋಗ್ಯ ಕಾರ್ಯಕರ್ತೆಯರಾದ ಡಿ.ಸಿ.ಮಂಜುಳಾ, ಸಾವಿತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts