ಕಾಂಗ್ರೆಸ್ ಕೆಟ್ಟು ಹೋದ ಇಂಜಿನ್, ಚುನಾವಣೆ ಬಳಿಕ ಗುಜರಿಗೆ

0
SRIRAMULU-ROAD-SHO
ಗಂಗಾವತಿಯ ಗಾಂಧಿ ವೃತ್ತದಿಂದ ಕನಕಗಿರಿಯ ಬಿಜೆಪಿ ಚುನಾವಣಾ ಕಚೇರಿವರೆಗೆ ಶನಿವಾರ ಆಯೋಜಿಸಿದ್ದ ರೋಡ್ ಶೋನಲ್ಲಿ ಸಾರಿಗೆ ಸಚಿವರು ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ, ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಇತರರಿದ್ದರು.

ಗಂಗಾವತಿ: ಕಾಂಗ್ರೆಸ್ ಕೆಟ್ಟು ಹೋದ ಇಂಜಿನ್‌ನಂತಾಗಿದ್ದು, ಚುನಾವಣೆ ಬಳಿಕ ಗುಜರಿಗೆ ಸೇರಲಿದೆ ಎಂದು ಸಾರಿಗೆ ಸಚಿವರು ಹೇಳಿದರು.
ನಗರದ ಗಾಂಧಿ ವೃತ್ತದಿಂದ ಕನಕಗಿರಿಯ ಬಿಜೆಪಿ ಚುನಾವಣಾ ಕಚೇರಿವರಿಗೂ ಆಯೋಜಿಸಿದ್ದ ರೋಡ್ ಶೋನಲ್ಲಿ ಶನಿವಾರ ಮಾತನಾಡಿದರು. 70ವರ್ಷ ಆಳಿದ ಕಾಂಗ್ರೆಸ್ ಬಗ್ಗೆ ಜನರಿಗೆ ಗೊತ್ತಾಗಿದ್ದು, ಈಗಾಗಲೇ ಮೂಲೆ ಸೇರಿಸಿದ್ದಾರೆ.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ಪ್ರಿಯಾಂಕಗಾಂಧಿ ಮತ್ತು ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ನಡೆಸಿದ ಪ್ರದೇಶದಲ್ಲೆಲ್ಲ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಸುಳ್ಳು ಆರೋಪದ ಮೂಲಕ ಅಧಿಕಾರ ಹಿಡಿಯಲೆತ್ನಿಸುತ್ತಿರುವ ಕಾಂಗ್ರೆಸ್ ನಿರೀಕ್ಷೆ ಹುಸಿಯಾಗಲಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಕೆಆರ್‌ಪಿಪಿ ಸ್ಪರ್ಧೆ ಬಗ್ಗೆ ಏನನ್ನೂ ಮಾತನಾಡಲಾರೆ, ಚುನಾವಣೆ ಹಿನ್ನೆಲೆಯಲ್ಲಿ ಸ್ಪರ್ಧೆ ಸಹಜ ಎಂದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಸೋಲಿನ ಭಯ ಶುರುವಾಗಿದೆ; ಶ್ರೀರಾಮುಲು

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಯೋಜನೆಗಳು ಜಾರಿ ಬಂದಿದ್ದು, ನೀರಾವರಿ ಕ್ಷೇತ್ರ ಬಲಪಡಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡುವುದರ ಜತೆಗೆ ಮೂಲ ಸೌಕರ್ಯ ಕಲ್ಪಿಸಿಕೊಡಲಾಗಿದೆ ಎಂದರು.

ರೋಡ್ ಶೋನಲ್ಲಿ ಮಹಿಳಾ ಕಾರ್ಯಕರ್ತೆಯರಿಂದ ನೃತ್ಯ

ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಮಾತನಾಡಿ, ಕಿಷ್ಕಿಂದಾ ಕ್ಷೇತ್ರಕ್ಕೆ ಆಯೋಧ್ಯೆಯಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ ಬರಲಿದ್ದು, ಜನತೆಯನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಲಿದ್ದಾರೆ. ಪಕ್ಷದ ಬೆಂಬಲಕ್ಕೆ ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳೇ ಕಾರಣವಾಗಲಿವೆ ಎಂದರು. ರೋಡ್ ಶೋನಲ್ಲಿ ಮಹಿಳಾ ಕಾರ್ಯಕರ್ತೆಯರು ನೃತ್ಯ ಮಾಡಿದರೆ, ಯುವ ಕಾರ್ಯಕರ್ತರು ಮೋದಿ ಭಾವಚಿತ್ರದೊಂದಿಗೆ ಗಮನಸೆಳೆದರು.

ಇದನ್ನೂ ಓದಿ: ನಾವು ಅಶ್ವಮೇಧ ಕುದುರೆ ಬಿಟ್ಟಿದ್ದೇವೆ, ಕಾಂಗ್ರೆಸ್​ಗೆ ದಮ್ಮು ತಾಕತ್ ಇದ್ದರೆ ಕಟ್ಟಿ ಹಾಕಿ; ಶ್ರೀರಾಮುಲು ಸವಾಲು

ಕ್ಷೇತ್ರ ಉಸ್ತುವಾರಿಗಳಾದ ದಿಲ್ಲಿಯ ಅಜಯ್ ಮಹಾವರ್, ಪ್ರಭುಕಪಗಲ್, ಮುಖಂಡರಾದ ನೆಕ್ಕಂಟಿ ಸೂರಿಬಾಬು, ಕೆಲೋಜಿ ಸಂತೋಷ್, ಎಚ್.ಎಂ. ಸಿದ್ರಾಮಯ್ಯಸ್ವಾಮಿ, ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ, ನಗರ ಘಟಕದ ಅಧ್ಯಕ್ಷ ಕಾಶೀನಾಥ ಚಿತ್ರಗಾರ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸಿದ್ದಲಿಂಗಯ್ಯ ಗಡ್ಡಿಮಠ, ರಾಧಾ ಉಮೇಶ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಕೆ.ವೆಂಕಟೇಶ, ಶಿವಪ್ಪ ಮಾದಿಗ, ಶಕುಂತಲಾ ಕಲ್ಲೂರ್, ಅಮರಜ್ಯೋತಿ ವೆಂಕಟೇಶ ಇತರರಿದ್ದರು.