More

    ಆದ್ಯತೆ ಮೇರೆಗೆ ಶಾಲೆಗಳಲ್ಲಿ ಸೌಕರ್ಯ – ತಾಪಂ ಅಧ್ಯಕ್ಷ ಮಹ್ಮದ್ ರಫೀ ಹೇಳಿಕೆ

    ಗಂಗಾವತಿ: ಶಾಲೆಗಳಲ್ಲಿ ಆದ್ಯತೆ ಮೇರೆಗೆ ಮೂಲ ಸೌಕರ್ಯಕಗಳನ್ನು ಒದಗಿಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷ ಮಹ್ಮದ್ ರಫೀ ಹೇಳಿದರು.

    ತಾಲೂಕಿನ ಶ್ರೀರಾಮನಗರದ ಬೊಬ್ಬಾ ರಾಮಚಂದ್ರರಾವ್ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶುದ್ಧ ಕುಡಿವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಪಂದಿಂದ ಮೂರು ಲಕ್ಷ ರೂ. ವೆಚ್ಚದಲ್ಲಿ ಕುಡಿವ ನೀರಿನ ಘಟಕ ನಿರ್ಮಿಸಲಾಗಿದೆ. ಶಾಲೆಯ ಆವರಣದಲ್ಲಿ ಮರಗಳನ್ನು ಬೆಳೆಸಲು ಶಿಕ್ಷಕರು ಆಸಕ್ತಿ ವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಮನೆಗೊಂದು ಸಸಿ ನೆಟ್ಟು ಹಸಿರೀಕರಣಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

    ತಾಪಂ ಇಒ ಮೋಹನ್ ಮಾತನಾಡಿ, ಕುಡಿವ ನೀರು, ನೈರ್ಮಲೀಕರಣ ಸೇರಿ ಇತರ ಮೂಲ ಸೌಕರ್ಯಕ್ಕಾಗಿ ಸ್ಥಳೀಯ ಗ್ರಾಪಂ ನೆರವು ಪಡೆಯುವಂತೆ ಸಲಹೆ ನೀಡಿದರು. ಬಿಇಒ ಸೋಮಶೇಖರಗೌಡ, ಸಿಡಿಪಿಒ ಗಂಗಪ್ಪ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ರೆಡ್ಡಿ ವೀರರಾಜು, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಜಿಪಂ ಎಇ ಪಲ್ಲವಿ ಗುನ್ನಾಳ್, ಶಿಕ್ಷಕ ಸತ್ಯನಾರಾಯಣ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts