More

    ಮನೆ ಬಾಗಿಲಿಗೆ ಪೌಷ್ಟಿಕ ಆಹಾರದ ಕಿಟ್ – ಸಿಡಿಪಿಒ ಗಂಗಪ್ಪ ಹೇಳಿಕೆ

    ಗಂಗಾವತಿ: ಅಪೌಷ್ಟಿಕತೆ ನಿಯಂತ್ರಣಕ್ಕೆ ಪೋಷಣ್ ಆಭಿಯಾನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಿಡಿಪಿಒ ಗಂಗಪ್ಪ ಹೇಳಿದರು.

    ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಗುರುವಾರ ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿವಮೊಗ್ಗದ ಸಮನ್ವಯ ಟ್ರಸ್ಟ್‌ನಿಂದ ಆಯೋಜಿಸಿದ್ದ ಬೀದಿ ನಾಟಕದ ಮೂಲಕ ಪೋಷಣ್ ಅಭಿಯಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗರ್ಭಿಣಿ ಮತ್ತು ಬಾಣಂತಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಮನೆಗಳಿಗೆ ತೆರಳಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ವಿಚಾರಿಸುವುದರ ಜತೆಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಮನೆಗೆ ತಲುಪಿಸಲಾಗುತ್ತಿದೆ ಎಂದರು.

    ಜಾಗೃತಿ ಅಭಿಯಾನದ ಸಂಚಾಲಕ ಸಂತೋಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶರಣಮ್ಮ ಸಜ್ಜನ್, ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ಶಿವನಗೌಡ, ಕಲಾವಿದರಾದ ಶರಣು, ಮೈಲಾರಪ್ಪ, ರವಿ, ವೀರಣ್ಣ, ಮಂಜು, ರೇಖಾ, ಮಾಳಮ್ಮ, ಶಿವಾನಿ, ಯಮನೂರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts