More

    ಗೌರಿಯರ ಗಣೇಶ ಹಬ್ಬ: ಗಜಮುಖ ಗಣಪತಿಗೆ ತಾರೆಯರ ವಂದನೆ…

    ಬೆಂಗಳೂರು: ದೇಶದಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಕರೋನಾ ಎಂಬ ವ್ನಿ ನಿವಾರಣೆ ಆಗುತ್ತಿರುವ ಕಾರಣ ಎರಡು ವರ್ಷಗಳ ಬಳಿಕ ಮತ್ತೆ ಸಡಗರದಿಂದ ಗಣೇಶನನ್ನು ಮನೆ, ಮನಗಳಿಗೆ ಬರಮಾಡಿಕೊಳ್ಳಲಾಗುತ್ತಿದೆ. ಗಣೇಶ ಹಬ್ಬ ಸಿನಿಮಾ ಮಂದಿಗೂ ತುಂಬ ಇಷ್ಟವಾದ ಹಬ್ಬ. ವ್ನಿನಿವಾರಕನಿಗೆ ಪೂಜಿಸಿಯೇ ಹೊಸ ಚಿತ್ರಗಳ ಪ್ರಾರಂಭವಾಗುವುದು ಅದಕ್ಕೆ ಪ್ರಮುಖ ಕಾರಣ. ಈ ಬಾರಿ ಕನ್ನಡ ಚಿತ್ರರಂಗದ ಚಂದದ ಗೌರಿಯರು ಗಣೇಶ ಹಬ್ಬವನ್ನು ಹೇಗೆ ಆಚರಿಸುತ್ತಿದ್ದಾರೆ ಎಂದು “ವಿಜಯವಾಣಿ’ ಜತೆ ಮಾತನಾಡಿದ್ದಾರೆ.

    ಗೌರಿಯರ ಗಣೇಶ ಹಬ್ಬ: ಗಜಮುಖ ಗಣಪತಿಗೆ ತಾರೆಯರ ವಂದನೆ...101 ಮನೆಗಳಿಗೆ ಹೋಗುತ್ತಿದ್ದೆ!
    ನಮ್ಮ ಮನೆಯಲ್ಲಿ ಗೌರಿ| ಗಣೇಶ ಹಬ್ಬ ಸರಳವಾಗಿ ಆಚರಿಸುತ್ತೇವೆ. ಮನೆಯಲ್ಲಿ ದೇವರ ಪೂಜೆ ಮಾಡಿ, ಸಿಹಿ ಊಟ ಮಾಡುತ್ತೇವೆ. ಆದರೆ, ಬಾಲ್ಯದಲ್ಲಿ ನಾನು ಪ್ರತಿ ವರ್ಷ ಗೌರಿ| ಗಣೇಶ ಹಬ್ಬವನ್ನು ತುಂಬ ಎಂಜಾಯ್​ ಮಾಡುತ್ತಿದ್ದೆ. ಐದಾರು ಜನ ಫ್ರೆಂಡ್ಸ್​ ಜತೆ 101 ಮನೆಗಳಿಗೆ ಭೇಟಿ ಕೊಡುತ್ತಿದ್ದೆ. ಅಲ್ಲಿ ಗೌರಿ| ಗಣೇಶ ಕೂರಿಸಿದ್ದರೆ, ದೇವರಿಗೆ ಕೈ ಮುಗಿದು ಬರುತ್ತಿದ್ದೆವು. ನನಗೆ ಆಗ ಗಣೇಶ ಹಬ್ಬ ಅಂದರೆ ತುಂಬ ಇಷ್ಟ. ಒಂದು ರೀತಿ ಗಣೇಶ ನನ್ನ ್ರೆಂಡ್​ ಎಂಬ ಭಾವನೆ ಇತ್ತು. ಏರಿಯಾದಲ್ಲಿ ಮ್ಯೂಸಿಕ್​, ಆರ್ಕೆಸ್ಟ್ರಾ ನಡೆಯುತ್ತಿದ್ದರೆ, ಅಲ್ಲಿಗೆ ಹೋಗುತ್ತಿದ್ದೆ.
    | ಅಮೃತಾ ಐಯಂಗಾರ್​, ನಟಿ

    ಗೌರಿಯರ ಗಣೇಶ ಹಬ್ಬ: ಗಜಮುಖ ಗಣಪತಿಗೆ ತಾರೆಯರ ವಂದನೆ...ಮನೆಯಲ್ಲಿ ಒಬ್ಬಟ್ಟು ರೆಡಿ!
    ಈ ಬಾರಿ ಹಬ್ಬಕ್ಕೆ ಆಗಲೇ ಮನೆಯಲ್ಲಿ ಒಬ್ಬಟ್ಟು ರೆಡಿಯಾಗಿದೆ. ಜೋರು ಮಳೆಯಿರುವ ಕಾರಣ ಹೊರಗೆಲ್ಲೂ ಹೋಗುತ್ತಿಲ್ಲ. ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿಹಬ್ಬವನ್ನು ಲಕ್ಷ್ಮಿ ಕೂರಿಸಿ ಅದ್ಧೂರಿಯಾಗಿ ಆಚರಿಸುತ್ತೇವೆ. ಬಾಲ್ಯದಲ್ಲಿ ಪ್ರತಿ ಗೌರಿ| ಗಣೇಶ ಮತ್ತು ದಸರಾ ಹಬ್ಬಗಳಿಗೆ ನಾನು, ನನ್ನ ತಂಗಿ ಇಬ್ಬರೂ ಅಜ್ಜಿ ಮನೆಗೆ ಹೋಗುತ್ತಿದ್ದೆವು. ಅಲ್ಲಿಯೇ ನಮ್ಮ ಕುಟುಂಬದ ಎಲ್ಲ 22 ಮಂದಿ ಸೋದರ ಸಂಬಂಧಿಗಳು ಸೇರುತ್ತಿದ್ದೆವು. ಅಜ್ಜಿ ಲಂಗ ದಾವಣಿ ಕೊಡಿಸುತ್ತಿದ್ದರು. ಅಕ್ಕ ಪಕ್ಕದ ರಸ್ತೆಗಳ ನಡುವೆಯೇ ಯಾರು ದೊಡ್ಡ ಗಣೇಶ ಕೂರಿಸುತ್ತಾರೆ ಅಂತ ಸ್ಪರ್ಧೆ ಬೇರೆ. ಈಗೀಗ ಅದ್ಧೂರಿ ಆಚರಣೆ ಕಡಿಮೆಯಾಗಿದೆ. ಆದರೆ, ಮನೆಯಲ್ಲೇ ಗೌರಿ ವ್ರತ ಮಾಡುತ್ತೇವೆ. ವ್ರತ ಮುಗಿಯುವವರೆಗೂ ಊಟ, ತಿಂಡಿ ಮಾಡುವುದಿಲ್ಲ.
    | ಸೋನು ಗೌಡ, ನಟಿ

    ಗೌರಿಯರ ಗಣೇಶ ಹಬ್ಬ: ಗಜಮುಖ ಗಣಪತಿಗೆ ತಾರೆಯರ ವಂದನೆ...ಟಪ್ಪಾಂಗುಚ್ಚಿ ಡ್ಯಾನ್ಸ್​ ಮಾಡಿದ್ದೆ!
    ನಾವು ಮನೆಯಲ್ಲಿ ಸರಳವಾಗಿ ಗೌರಿ| ಗಣೇಶ ಹಬ್ಬ ಆಚರಿಸುತ್ತೇವೆ. ಹಬ್ಬದಡಿಗೆ ಮಾಡಿ, ಪೂಜೆ ಮಾಡುತ್ತೇವೆ. ಸಂಬಂಧಿಕರ ಮನೆಗೆ ಕುಂಕುಮಕ್ಕೆ ಕರೆದರೆ ಹೋಗಿಬರುತ್ತೇನೆ. ಶಾಲಾ, ಕಾಲೇಜು ದಿನಗಳಲ್ಲಿ ಗಣೇಶ ಹಬ್ಬದ ಒಳ್ಳೆಯ ನೆನಪುಗಳಿವೆ. ಗಣೇಶನನ್ನು ಕೂರಿಸಿರುವ 21 ಮನೆಗಳಿಗೆ ಹೋಗಿ, ದರ್ಶನ ಪಡೆದು, ಕೈಮುಗಿದು ಬರುತ್ತಿದ್ದೆ ಅಥವಾ ಗಣೇಶ ದೇವಸ್ಥಾನಕ್ಕೆ ಹೋಗುತ್ತಿದ್ದೆ. ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರತಿ ವರ್ಷ ಗಣೇಶನನ್ನು ಕೂರಿಸುತ್ತಿದ್ದರು. ಆಗ ಜೂನಿಯರ್ಸ್​ ಗಣೇಶ ಕೂರಿಸಿದರೆ, ಆ ವರ್ಷದ ಸೀನಿಯರ್ಸ್​ ಆ ಗಣೇಶನನ್ನು ವಿಸರ್ಜಿಸುತ್ತಿದ್ದರು. ಆಗ ತಮಟೆಯವರನ್ನು ಕರೆಸಿ ದಾರಿಯುದ್ದಕ್ಕೂ ಟಪ್ಪಾಂಗುಚ್ಚಿ ಡ್ಯಾನ್ಸ್​ ಮಾಡಿದ್ದೆ.
    |ರಂಜಿನಿ ರಾವನ್​, ನಟಿ


    ಗೌರಿಯರ ಗಣೇಶ ಹಬ್ಬ: ಗಜಮುಖ ಗಣಪತಿಗೆ ತಾರೆಯರ ವಂದನೆ...ಅಜ್ಜ, ಅಜ್ಜಿ ನೆನಪು…

    ಈ ಬಾರಿ ಗೌರಿ- ಗಣೇಶ ಹಬ್ಬ ತುಂಬ ಸರಳವಾಗಿ ಆಚರಿಸುತ್ತಿದ್ದೇವೆ. ಕರೋನಾ ಸೋಂಕಿನಿಂದಾಗಿ ಕಳೆದ ವರ್ಷ ನನ್ನ ಅಜ್ಜ, ಅಜ್ಜಿ, ಚಿಕ್ಕಪ್ಪ ವಿಧಿವಶರಾದ ಕಾರಣ ಈ ವರ್ಷ ಹಬ್ಬದ ಸಂಭ್ರಮ ನಮ್ಮ ಮನೆಗಳಲ್ಲಿ ಕೊಂಚ ಕಡಿಮೆಯೇ. ಆದರೆ, ಬಾಲ್ಯದಲ್ಲಿ ಪ್ರತಿ ವರ್ಷ ಶಿವಮೊಗ್ಗದಲ್ಲಿದ್ದ ಅಜ್ಜ, ಅಜ್ಜಿ ಮನೆಗೆ ಹೋಗುತ್ತಿದ್ದೆ. ಅಲ್ಲಿ ಎಲ್ಲರೂ ಸೇರಿ ಗಣಪತಿ ಕೂರಿಸುತ್ತಿದ್ದೆವು. ನಾಲ್ಕೆ$ದು ದಿನಗಳ ಕಾಲ ಅಲ್ಲಿಯೇ ಇದ್ದು ಸಂಭ್ರಮದಿಂದ ಆಚರಿಸುತ್ತಿದ್ದೆ. ಅಜ್ಜಿ ಮಾಡುವ ರುಚಿರುಚಿಯಾದ ಸ್ವೀಟ್ಸ್​ ತಿನ್ನಬೇಕು ಅಂತಲೇ ಹಬ್ಬಕ್ಕೆ ಕಾಯುತ್ತಿದ್ದೆ ದಿನಗಳವು. ಗಣೇಶನನ್ನು ನೀರಿಗೆ ಬಿಡಲು ಹೋಗುವಾಗ ಎಲ್ಲರೂ ಕುಣಿಯುತ್ತಿದ್ದೆವು.
    | ದಿವ್ಯಾ ಉರುಡುಗ, ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts