More

    ಸಂಕಷ್ಟದಲ್ಲಿ ಗಣೇಶಮೂರ್ತಿ ತಯಾರಕರು: ವರ್ಷ ಪೂರ್ತಿ ಮಾಡಿದ ಕೆಲಸಕ್ಕೆ ಬೆಲೆ ಇಲ್ಲ , ಲಕ್ಷಾಂತರ ರೂ. ನಷ್ಟ

    ಲಕ್ಕೂರು : ಕರೊನಾ 3ನೇ ಅಲೆ ಹಿನ್ನೆಲೆಯಲ್ಲಿ ಸರ್ಕಾರ ಸಾಮೂಹಿಕ ಗಣೇಶೋತ್ಸವಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಳೆದ 1 ವರ್ಷದಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಂಡಿರುವವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತಾಲೂಕಿನ ಗಡಿಭಾಗದ ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಎಟ್ಟಕೋಡಿ ಗ್ರಾಮದ 10ಕ್ಕೂ ಹೆಚ್ಚು ಕುಟುಂಬದವರು ಗಣೇಶ ಮೂರ್ತಿ ತಯಾರಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಆದರೆ ಈಗ ಮೂರ್ತಿಗಳನ್ನು ಯಾರೂ ಕೇಳದ ಕಾರಣ ನಷ್ಟ ಅನುಭವಿಸುವಂತಾಗಿದೆ. ವರ್ಷದಿಂದ ವರ್ಷಕ್ಕೆ ಮಾಡಿದ ಕೆಲಸ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
    ಶೆಡ್‌ಗಳಲ್ಲೇ ಉಳಿದ ಮೂರ್ತಿಗಳು: ಸೆ.9 ಹಾಗೂ 10ರಂದು ಗೌರಿ-ಗಣೇಶನ ಹಬ್ಬವಿದೆ. 3ನೇ ಅಲೆ ಹೆಚ್ಚಾಗುವ ಬಗ್ಗೆ ತಜ್ಞರು ವರದಿ ನೀಡಿರುವುದರಿಂದ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಈವರೆಗೂ ಅನುಮತಿ ನೀಡಿಲ್ಲ. ಈವರೆಗೆ ಗಣೇಶನ ಮೂರ್ತಿ ತಯಾರು ಮಾಡಿ ದಾಸ್ತಾನು ಮಾಡಿರುವ ಶೆಡ್‌ಗಳಿಂದ ಒಂದೇ ಒಂದು ಮೂರ್ತಿ ಮಾರಾಟವಾಗಿಲ್ಲ.

    ಗಣೇಶೋತ್ಸವಕ್ಕೆ ಅನುಮತಿ : 
    ಸರ್ಕಾರ ಸಾಮೂಹಿಕ ಗಣೇಶೋತ್ಸವಕ್ಕೆ ಅನುಮತಿ ನೀಡದಿದ್ದರೆ ಇವರು ವರ್ಷಪೂರ್ತಿ ಹಾಕಿದ ದುಡಿಮೆಗೆ ಬೆಲೆಯೇ ಇಲ್ಲದಂತಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಹಲವು ಮುಂಜಾಗ್ರತಾ ಕ್ರಮ ಕೈಗೊಂಡು ಹಬ್ಬ ಆಚರಣೆಗೆ ಅನುಮತಿ ನೀಡಿದರೆ ತಯಾರಕರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ ಎಂದು ಎಟ್ಟಕೋಡಿ ಗ್ರಾಮದ ಗಣೇಶನ ತಯಾರಕರು ಒತ್ತಾಯಿಸಿದ್ದಾರೆ.

    ಕಾರ್ಮಿಕರಿಗೆ ಹೆಚ್ಚಿನ ಹಣ ನೀಡಿ 40 ಸಾವಿರಕ್ಕೂ ಹೆಚ್ಚಿನ ಮೂರ್ತಿಗಳನ್ನು ತಯಾರಿಸಲಾಗಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಮೂರ್ತಿ ತಯಾರಕರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಪರಿಹಾರ ನೀಡಿ ಅನುಕೂಲ ಕಲ್ಪಿಸಬೇಕು.
    ವೆಂಕಟೇಶ್, ಗಣೇಶಮೂರ್ತಿ ತಯಾರಕ, ಎಟ್ಟಕೋಡಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts