ಬೆಂಗಳೂರು: ಇಂದಿನ ದಿನಗಳಲ್ಲಿ ತೂಕ ಏರಿಕೆ, ಪಿಸಿಓಡಿ (PCOD) ಮತ್ತು ಟೈಪ್-2 ಮಧುಮೇಹಕ್ಕೆ ಪ್ರಮುಖ ಕಾರಣ 'ಇನ್ಸುಲಿನ್ ಪ್ರತಿರೋಧ'. ನಮ್ಮ ದೇಹದ ಜೀವಕೋಶಗಳು ಇನ್ಸುಲಿನ್ ಹಾರ್ಮೋನ್‌ಗೆ ಸರಿಯಾಗಿ ಸ್ಪಂದಿಸದಿದ್ದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ.
1. ದಾಲ್ಚಿನ್ನಿ - ನೈಸರ್ಗಿಕ ಇನ್ಸುಲಿನ್
ದಾಲ್ಚಿನ್ನಿ ಕೇವಲ ಮಸಾಲೆಯಲ್ಲ, ಇದು ಜೀವಕೋಶಗಳಲ್ಲಿ ಇನ್ಸುಲಿನ್ ಗ್ರಹಕಗಳನ್ನು ಚುರುಕುಗೊಳಿಸುತ್ತದೆ. ಪ್ರತಿದಿನ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಉಗುರುಬೆಚ್ಚಗಿನ ನೀರು ಅಥವಾ ಸ್ಮೂಥಿಗೆ ಸೇರಿಸಿ ಕುಡಿಯುವುದರಿಂದ ಇನ್ಸುಲಿನ್ ಪ್ರತಿರೋಧ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
2. ಮೆಂತೆ ಕಾಳುಗಳು
ಮೆಂತೆಯಲ್ಲಿರುವ ಕರಗುವ ನಾರಿನಂಶವು ರಕ್ತದಲ್ಲಿ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ರಾತ್ರಿ ನೆನೆಸಿಟ್ಟ ಮೆಂತೆ ನೀರನ್ನು ಬೆಳಿಗ್ಗೆ ಕುಡಿಯುವುದು ಅಥವಾ ಅಡುಗೆಯಲ್ಲಿ ಮೆಂತೆ ಸೊಪ್ಪನ್ನು ಬಳಸುವುದರಿಂದ ಇನ್ಸುಲಿನ್ ಕಾರ್ಯಕ್ಷಮತೆ ಸುಧಾರಿಸುತ್ತದೆ.
3. ಆಪಲ್ ಸೈಡರ್ ವಿನೆಗರ್
ಊಟಕ್ಕೆ ಮುಂಚೆ ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಕುಡಿಯುವುದರಿಂದ ಕಾರ್ಬೋಹೈಡ್ರೇಟ್ ಸೇವನೆಯ ನಂತರ ಉಂಟಾಗುವ 'ಶುಗರ್ ಸ್ಪೈಕ್' ಅನ್ನು ಶೇ. 30 ರಷ್ಟು ತಡೆಯಬಹುದು. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ.
4. ಸಾಬೂತು ಧಾನ್ಯಗಳು ಮತ್ತು ನಾರಿನಂಶ
ಸಂಸ್ಕರಿಸಿದ ಅಕ್ಕಿ ಅಥವಾ ಮೈದಾ ಬದಲಿಗೆ ರಾಗಿ, ನವಣೆ, ಓಟ್ಸ್ ಮತ್ತು ಬ್ರೌನ್ ರೈಸ್ ಬಳಸಿ. ಇದರಲ್ಲಿರುವ ನಾರಿನಂಶವು ಇನ್ಸುಲಿನ್ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.
5. ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್
ಅಕ್ರೋಟ್, ಬಾದಾಮಿ, ಚಿಯಾ ಸೀಡ್ಸ್ ಮತ್ತು ಮೊಟ್ಟೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಿಸುತ್ತವೆ.