More

    ಹವಾಮಾನ ವೈಪರೀತ್ಯ ಕಣ್ಣು ಬೇನೆ ವಿಪರೀತ

    ಗಜೇಂದ್ರಗಡ: ಬದಲಾದ ಹಮಾಮಾನದಿಂದ ಕಣ್ಣಿನ ಬೇನೆ ಶುರುವಾಗಿದೆ. ಕೆಲವು ದಿನಗಳಿಂದ ತಾಲೂಕಿನಲ್ಲಿ ಕಣ್ಣು ಬೇನೆ ಪ್ರಕರಣಗಳು ಹೆಚ್ಚುತ್ತಲಿವೆ. ಹಲವರು ತೊಂದರೆ ಅನುಭವಿಸುತ್ತಿದ್ದಾರೆ.
    ಕಳೆದ 15-20 ದಿನಗಳಿಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಬೇನೆ ಕಾಣಿಸಿಕೊಂಡಿದೆ. ಕುಟುಂಬದಲ್ಲಿ ಒಬ್ಬರಿಗೆ ಬಂದರೆ ಕೆಲ ದಿನಗಳಲ್ಲಿಯೇ ಕುಟುಂಬದ ಎಲ್ಲರಿಗೂ ವ್ಯಾಪಿಸುತ್ತಿದೆ. ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಮಡ್ಡು ಬರುವುದು, ನೋವು, ಬಾವು ಬರುವುದು ಇವೆಲ್ಲ ಇದರ ಲಕ್ಷಣಗಳು. ಆರಂಭದಲ್ಲಿ ಒಂದು ಕಣ್ಣಿಗೆ ಬಂದರೂ ನಂತರ ಮತ್ತೊಂದು ಕಣ್ಣಿಗೂ ಬಾಧಿಸುತ್ತದೆ. ಮೂರರಿಂದ ಐದು ದಿನಗಳವರೆಗೆ ಈ ಸಮಸ್ಯೆ ಇರುತ್ತದೆ. ಆದರೆ ಸೋಂಕು ಆಗಬಾರದು, ನೋವು, ಉರಿಯಾಗದಂತೆ ತಡೆಯುವ ದೃಷ್ಟಿಯಿಂದ ಔಷಧ ನೀಡಿರುತ್ತೇವೆ ಎನ್ನುತ್ತಾರೆ ವೈದ್ಯರು.
    ನೋಡೋದ್ರಿಂದ ಬರೋದಿಲ್ಲ: ಕಣ್ಣು ಬೇನೆಗೊಳಗಾದವರ ಕಣ್ಣನ್ನು ನೋಡಿದರೆ ಬೇರೆಯವರಿಗೆ ಹರಡುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಕಣ್ಣು ಬೇನೆ ಬಂದವರನ್ನು ಕಂಡ ಕೂಡಲೇ ಅವರತ್ತ ನೋಡದೆ ಬೇರೆ ಕಡೆ ಮುಖ ಮಾಡುವವರೇ ಹೆಚ್ಚು. ಆದರೆ, ಕಣ್ಣನ್ನು ನೋಡುವುದರಿಂದ ಇನ್ನೊಬ್ಬರಿಗೆ ಬರುವುದಿಲ್ಲ. ತೊಂದರೆಗೊಳಗಾದವರು ಬಳಸುವ ಬಟ್ಟೆಗಳ ಸಂಪರ್ಕದಿಂದ ಇತರರಿಗೆ ಹರಡುತ್ತವೆ. ಕಣ್ಣು ಕೆಂಪಗಾಗಿದೆ ಎಂದು ಮನೆಯಲ್ಲೇ ಔಷಧ ಹಾಕಿಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ವೈದ್ಯರು.

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೇತ್ರ ತಜ್ಞರಿಲ್ಲ. ಇದರಿಂದ ಗದಗ, ಹುಬ್ಬಳ್ಳಿಗೆ ಹೋಗುವ ಸ್ಥಿತಿ ಇದೆ. ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾಯಂ ನೇತ್ರ ತಜ್ಞರನ್ನು ನೇಮಿಸಬೇಕು.
    ಚಂದ್ರು ಆಲಾಪೂರ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts