More

    ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

    ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ 10 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ. ಭೀ. ಹುಯಿಲಗೋಳ, ಮೇಜರ್ ಮಲ್ಲಪ್ಪ ಬ್ಯಾಳಿ, ಗದಗ ಜಿಲ್ಲಾ ಶಾಲಾ ಶಿಕ್ಷಣದ ಉಪನಿರ್ದೇಶಕರಾದ ಶ್ರೀ ಎಂ. ಎ.  ರಡ್ಡೇರ, ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್. ಎಸ್ ಬುರಡಿ,  ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಡಾ ಗಂಗೂಬಾಯಿ ಪವಾರ, ಕ್ಯಾಪ್ಟನ್ ಬಿ. ಎಸ್. ರಾಠೋಡ್, ಶ್ರೀ ರವಿ. ಎಂ. ಹೆಬ್ಬಳ್ಳಿ ಹಾಗೂ ಡಾ. ಪವನ ಎಸ್. ಹುಯಿಲಗೋಳ ರವರು ಜ್ಯೋತಿ ಬೆಳಗಿಸಿ, ಸರಸ್ವತಿ ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವುದರ ಮೂಲಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಮೇಜರ್ ಮಲ್ಲಪ್ಪ ಬ್ಯಾಳಿ ರವರು ದೇಶದ ರಕ್ಷಣಾ ಪಡೆಗೆ ವಿದ್ಯಾದಾನ ಸಮಿತಿಯ ಕೊಡುಗೆ ಅಪಾರ. ಈ ಶಾಲೆಯ ಸಾವಿರಾರು ಎನ್ ಸಿ ಸಿ ವಿದ್ಯಾರ್ಥಿಗಳು ಭಾರತ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೌಢ ಶಾಲಾ ಹಂತದ  ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜೊತೆಗೆ ಎನ್ ಸಿ ಸಿ ಸೇವೆಯಲ್ಲಿ ಸೇರಿ  ರಾಷ್ಟ್ರದ ರಕ್ಷಣೆಗೆ ಸಿದ್ದರಾಗುವುದಲ್ಲದೆ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಎನ್ ಸಿ ಸಿ ಅತ್ಯವಶ್ಯಕವಾಗಿದೆ ಹಾಗಾಗಿ ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಮೀಸಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕರೆ ನೀಡಿದರು.  ವಿದ್ಯಾದಾನ ಸಮಿತಿಯು ಒಂದೇ ಕ್ಯಾಂಪಸ್ ನಲ್ಲಿ ಹಲವಾರು ಅಂಗ ಸಂಸ್ಥೆಗಳನ್ನು ಹೊಂದಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವಲ್ಲಿ ಮುಂಚೂಣಿಯಲ್ಲಿ ತಲೆಯೆತ್ತಿ ನಿಂತಿದೆ. ವಿದ್ಯಾದಾನ ಶಿಕ್ಷಣ ಸಂಸ್ಥೆಯು ಜಿಲ್ಲೆಯಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ.  ಈ ಕಾರ್ಯಕ್ರಮದಲ್ಲಿ ಇಷ್ಟೊಂದು ಪಾಲಕರು ನೆರೆದಿರುವುದು ನೋಡಿದರೆ ಇಲ್ಲಿಯ ಶಿಕ್ಷಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಇನ್ನು ಹೆಚ್ಚಿನ ರೀತಿಯಲ್ಲಿ ಈ ಶಿಕ್ಷಣ ಸಂಸ್ಥೆಯು ಬೆಳೆದು ಮಕ್ಕಳ ಭವಿಷ್ಯ ರೂಪಿಸಲಿ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ. ಭೀ. ಹುಯಿಲಗೋಳ ರವರು ಮಕ್ಕಳು ಚಿಕ್ಕಂದಿನಿಂದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ಧಿಶಕ್ತಿ,  ಧೈರ್ಯ ಹೆಚ್ಚುವುದರ ಜೊತೆಗೆ ಭಯ ಹೋಗಲಾಡಿಸಬಹುದು. ವರ್ಷದ ಶಾಲಾ ವಾರ್ಷಿಕೋತ್ಸವದ  ಮನರಂಜನೆಗಳಲ್ಲಿ ಭಾಗವಹಿಸುವುದರಿಂದ ಮಗುವಿಗೆ ಸಾಮಾಜಿಕರಣ ಹಾಗೂ ಸಾಂಸ್ಕೃತಿಕ ಶಿಸ್ತನ್ನು ಬೆಳೆಸಿಕೊಳ್ಳಲಿಕ್ಕೆ ಸಹಾಯಕವಾಗುತ್ತದೆ  ಅದಕ್ಕೆ ಪೋಷಕರ ಸಹಮತವು ಇರಬೇಕಿದೆ ಎಂದು ಹೇಳಿದರು.

    ಗದಗ ಶಹರ ವಲಯದ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಶ್ರೀ ಆರ್. ಎಸ್. ಬುರಡಿ ರವರು ವಿದ್ಯಾರ್ಥಿಗಳು ಚಿಂತನಾ ಶೀಲರಾಗುವುದರಿಂದ ಅವರ ಮನಸ್ಸು ಕುತೂಹಲಕಾರಿಯಿಂದ ಕೂಡಿರುತ್ತದೆ.  ಪಾಠದ ಜೊತೆಗೆ ಪಠ್ಯತರ ಚಟುವಟಿಕೆಯಲ್ಲಿ  ಭಾಗವಹಿಸುವುದರಿಂದ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದನೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು, ಶಿಕ್ಷಕರು,  ಪೋಷಕರು ಎನ್ನುವ ಕೊಂಡಿ ಕೂಡಿಕೊಂಡಾಗ ಮಾತ್ರ ಸಕರಾತ್ಮಕ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. 

    ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯು ಬೆಳೆದ ಬಂದ ಹಿನ್ನೆಲೆಯನ್ನು ತಿಳಿಸುತ್ತಾ ಪ್ರಾಸ್ತವಿಕವಾಗಿ ಮಾತನಾಡಿದರು.

    ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ . ಆರ್.  ಡೊಳ್ಳಿನ ರವರು ವೇದಿಕೆಯ ಮೇಲೆ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.

    ಇದೇ ವೇಳೆ ಎನ್ ಸಿ ಸಿ ಯಲ್ಲಿ ಸಾಧನೆ ಮಾಡಿದ ಕ್ಯಾಪ್ಟನ್ ಡಾ. ಬಿ. ಎಸ್. ರಾಠೋಡ್ ರವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.  ತರಗತಿವಾರು ಆದರ್ಶ ವಿದ್ಯಾರ್ಥಿಗಳನ್ನು ಹಾಗೂ ಶಾಲಾವತಿಯಿಂದ ಉತ್ತಮ ವಿದ್ಯಾರ್ಥಿ  ಕು. ಶ್ರೇಯಾ ತಿಪ್ಪಣ್ಣವರ್ ವಿದ್ಯಾರ್ಥಿನಿಯನ್ನು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. 

    ಕು. ತನುಶ್ರೀ ಹಾದಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಕು. ಶಿವಾನಂದ. ಕೆ. ಹಾಗೂ ಸಂಗಡಿಗರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ನಾಡಗೀತೆಯನ್ನು ಹಾಡಿ ಗೌರವ ಸಲ್ಲಿಸಿದರು.

    ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಅರ್ಚನಾ ಗಿರಿ ತಿಮ್ಮಣ್ಣವರ್ ನಿರೂಪಿಸಿದರು. ಗಾಯತ್ರಿ ಅಸುಂಡಿ ಸ್ವಾಗತಿಸಿದರು. ವೀಣಾ ನಾಯಕ್ ವಂದಿಸಿದರು. 

    ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿಯ ಸಲಹೆಗಾರರಾದ ಶ್ರೀ ಭೀಮಸೇನ  ಎಸ್.  ಹುಯಿಲಗೋಳ, ಡಾ ರಶ್ಮಿ. ಪಿ. ಹುಯಿಲಗೋಳ, ಶ್ರೀ ರಂಗನಾಥ ಎಂ. ಶ್ರೀ ಜೆ. ಎಸ್. ಕಲ್ಯಾಣಿ, ಶ್ರೀ ಎಂ. ವಿ. ಹವಾಲ್ದಾರ, ಶಾಲಾ ಪ್ರಧಾನಿ ಕು. ತೇಜಶ್ರೀ ಹಾದಿ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಅಂಗ ಸಂಸ್ಥೆಯ ಮುಖ್ಯಸ್ಥರು,  ಉಪನ್ಯಾಸಕರು,  ಸಮಸ್ತ ಶಿಕ್ಷಕ /ಸಿಬ್ಬಂದಿ ವರ್ಗದವರು,  ಪಾಲಕರು,  ಸುದ್ದಿ ವರದಿಗಾರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts