More

    ಕನ್ನಡ ರಂಗಭೂಮಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಸಿದ್ಧರಾಮಶ್ರೀ

    ವಿಜಯವಾಣಿ ಸುದ್ದಿಜಾಲ ಗದಗ
    ಕಾವ್ಯಗಳಲ್ಲಿಯೇ ನಾಟಕ ರಮ್ಯವಾಗಿದೆ. ನವರಸಗಳಿಂದ ಸಂಪದ್ಭರಿತವಾದ ನಾಟಕಗಳು ಜನಮಾನಸವನ್ನು ಬೇಗನೇ ತಲುಪಿ ಮನರಂಜನೆಯ ಜೊತೆಗೆ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿವೆ. ಕನ್ನಡದ ರಂಗಭೂಮಿಗೆ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾದದ್ದು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ತೋಂಟದಾರ್ಯ ಕಲಾರಂಗ ಹಾಗೂ ರಂಗಾಸಕ್ತರ ಬಳಗದ ಸಹಯೋಗದಲ್ಲಿ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಮನಸ್ಸನ್ನು ಅರಳಿಸುವ, ಸಂತೋಷವನ್ನು ನೀಡುವ, ಸಮಾಜಕ್ಕೆ ಸಂದೇಶ ನೀಡಿ ಲೋಪದೋಷಗಳನ್ನು ತಿದ್ದುವ ಉದ್ದೇಶವನ್ನು ನಾಟಕಗಳು ಹೊಂದಿರುತ್ತವೆ. ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲಿ ಮುಳುಗಿರುವ ಜನರಿಗೆ ನೇರವಾಗಿ ನಡೆಯುವ ಸನ್ನಿವೇಶಗಳನ್ನು ತೊರಿಸುವ ಕಾರ್ಯ ನಾಟಕದ ಮೂಲಕ ನಡೆದಿರುವದು ಸಂತೋಷದ ವಿಷಯವಾಗಿದೆ ಎಂದರು.
    ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಗದಗ ಸಾಂಸತಿಕವಾಗಿ ಶ್ರೀಮಂತ ಪ್ರದೇಶವಾಗಿದೆ. ಕರ್ನಾಟಕದ ನಿಜವಾದ ಸಾಂಸತಿಕ ರಾಜಧಾನಿ ಗದಗ ಜಿಲ್ಲೆಯಾಗಿದೆ. ಸಾಹಿತ್ಯ, ಸಂಗೀತ, ರಂಗಭೂಮಿ ೇತ್ರಗಳು ಪ್ರಾಚಿನ ಕಾಲದಿಂದಲೂ ಮೂಲನೆಲೆಯಾಗಿ ಗುರುತಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಸಂಟನೆಗಳ ಜೊತೆಗೂಡಿ ಸಾಂಸತಿಕ ವೈಭವವನ್ನು ಪಸರಿಸುವ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ಕೆ ಸಾಂಸತಿಕ ಮನಸ್ಸಿನ ಜನ ಕೈಜೋಡಿಸುತ್ತಿರುವುದು ಪೂರಕ ಬೆಳವಣಿಗೆ ಎಂದರು.
    ಡಾ. ಜಿ. ಬಿ. ಪಾಟೀಲ, ಅಶೋಕ ಬರಗುಂಡಿ, ಡಾ. ಅನಂತ ಶಿವಪೂರ, ಪ್ರೊ. ಚಂದ್ರಶೇಖರ ವಸ್ತ್ರದ, ಶೇಖಣ್ಣ ಕಳಸಾಪುರಶೆಟ್ರ, ಡಾ. ಶೇಖರ ಸಜ್ಜನರ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts