ಎಸ್​ ಎಸ್​ ಎಲ್​ ಸಿ ಫಲಿತಾಂಶ ! ಜಿಲ್ಲೆಗೆ 25ನೇ ಸ್ಥಾನ

9

ವಿಜಯವಾಣಿ ಸುದ್ದಿಜಾಲ ಗದಗ
ಸೋಮವಾರ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆ 25ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಲಿತಾಂಶದಲ್ಲಿ ಕಳೆದ 26ನೇ ಸ್ಥಾನದಲ್ಲಿದ್ದ ಗದಗ ಈ ಬಾರಿ ಒಂದು ಸ್ಥಾನ ಮೇಲಕ್ಕೇರಿದೆ. ಜಿಲ್ಲೆಯ ಒಟ್ಟಾರೆ ಲಿತಾಂಶ ಶೇ.85.69ರಷ್ಟಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ವಿದ್ಯಾಥಿರ್ನಿಯರೇ ಮೇಲುಗೈ ಸಾಧಿಸಿದ್ದು, ಶೇ. 88.68 ರಷ್ಟು ವಿದ್ಯಾಥಿರ್ನಿಯರು, ಶೇ. 82.50 ರಷ್ಟು ವಿದ್ಯಾಥಿರ್ಗಳು ತೇರ್ಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟಾರೆ 14781 ವಿದ್ಯಾಥಿರ್ಗಳು ಹಾಜರಾಗಿದ್ದು, 12666 ವಿದ್ಯಾಥಿರ್ಗಳು ಪಾಸಾಗಿದ್ದಾರೆ. 25 ಸರ್ಕಾರಿ ಶಾಲೆಗಳು, 2 ಅನುದಾನಿತ ಹಾಗೂ 17 ಅನುದಾನ ರಹಿತ ಶಾಲೆಗಳು ಶೇ.100 ರಷ್ಟು ಫಲಿತಾಂಶ ಸಾಧಿಸಿವೆ. ಅನುದಾನ ರಹಿತ 2 ಶಾಲೆಗಳು ಶೇ. 40 ಕ್ಕಿಂತ ಕಡಿಮೆ, 1 ಶಾಲೆ ಶೂನ್ಯ ಫಲಿತಾಂಶದಿಂದ ಕಳಪೆ ಮಟ್ಟದ ಸಾಧನೆ ಮಾಡಿವೆ.

ಲಕ್ಷ್ಮೇಶ್ವರಕ್ಕೆ ಮೊದಲ ಮತ್ತು ಕೊನೆಯ ಸ್ಥಾನ:

ಜಿಲ್ಲೆಗೆ ತಲಾ ಇಬ್ಬರು ವಿದ್ಯಾಥಿರ್ಗಳು ಪ್ರಥಮ ಮತ್ತು ತೃತೀಯ ಸ್ಥಾನವನ್ನು ಪಡೆದಿದ್ದು ಮೂಲತಃ ಲಕ್ಷ್ಮೇಶ್ವರ ತಾಲೂಕಿನ ವಿದ್ಯಾಥಿರ್ಗಳಾಗಿದ್ದು, ಲಕ್ಷ್ಮೇಶ್ವರ ಬಿ.ಸಿ.ಎಸ್​ ರೋಟರಿ ಕನ್ನಡ ಮಾಧ್ಯಮ ಶಾಲೆ ಶೂನ್ಯ ಲಿತಾಂಶ ನೀಡಿದ ಜಿಲ್ಲೆಯ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಾಕ್ಸ್​
ಜಿಲ್ಲೆಗೆ ಪ್ರಥಮ ಸ್ಥಾನ:
ಲಕ್ಷ್ಮಿ ಜಿಗಳೂರು(619/625), ಬಟ್ಟೂರು ಹೈಸ್ಕೂಲ್​, ಲಕ್ಷ್ಮೇಶ್ವರ
ಸೌಮ್ಯ ಸೊರಟೂರು(619/625), ಗೊಜನೂರು ಮೊರಾಜಿರ್ ದೇಸಾಯಿ ಹೈಸ್ಕೂಲ್​, ಲಕ್ಷ್ಮೇಶ್ವರ

ಜಿಲ್ಲೆಗೆ ದ್ವೀತಿಯ:
ರಾಜೇಶ್ವರಿ ಚೆನ್ನಪ್ಪಗೌಡರ(618/625), , ಆದರ್ಶ ವಿದ್ಯಾಲಯ, ರೋಣ ತಾಲೂಕಿನ ಇಟಗಿ

ಜಿಲ್ಲೆಗೆ ತೃತೀಯ:

ಚೇತನ ಹತ್ತಿಕಾಳ(617/625), ಆಕ್ಸರ್ಡ್​ ಇಂಗ್ಲಿಷ್​ ಮಿಡಿಯಂ, ಲಕ್ಷ್ಮೇಶ್ವರ