More

    ನಗರಸಭೆ ಆಸ್ತಿ ನಗರಸಭೆ ಹಕ್ಕು: ಉಷಾ ದಾಸರ.

    ವಿಜಯವಾಣಿ  ಸುದ್ದಿಜಾಲ ಗದಗ

    ನಗರಸಭೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ವಕಾರು ಸಾಲು ಜಾಗೆಯನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳಲು ನಗರಸಭೆ ಅನುಮತಿ ಇಲ್ಲದೇ, ಕಾನೂನು ಉಲ್ಲಂಘಿಸಿ ಸಚಿವ ಎಚ್.ಕೆ. ಪಾಟೀಲ ಅವರು ವಿಧೇಯಕ ಮಂಡನೆ ಮಾಡಿದ್ದಾರೆ. ಈ ನಿರ್ಧಾರವನ್ನು ನಗರಸಭೆ ವಿರೋಧಿಸುತ್ತದೆ. ನಗರಸಭೆ ಆಸ್ತಿಯನ್ನು ನಗರಸಭೆಗೆ ಉಳಿಸಿಕೊಳ್ಳುವುದು ನಗರಸಭೆಯ ಹಕ್ಕಾಗಿದೆ ಎಂದು ನಗರಸಭೆ ಅಧ್ಯಕ್ಷೆ ಉಷಾ ದಾಸರ ಹೇಳಿದರು.

    ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಚ್.ಕೆ. ಪಾಟೀಲರು ಕಾನೂನು ಬಲ್ಲವರು ಆಗಿದ್ದಾರೆ. ಆದರೆ, ನಗರಸಭೆ ಹೆಸರಲ್ಲಿ ಇರುವ ಈ ಜಾಗೆಯನ್ನು ನಗರಸಭೆ ಅನುಮತಿ ಇಲ್ಲದೇ ಪ್ರಾಧಿಕಾರ ರಚನೆಗೆ ಮುಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ನಗರದ 34 ಎಕರೆ ವಕಾರಸಾಲು ಜಾಗೆಯು ನಗರಸಭೆಯಲ್ಲಿ ಹೆಸರಲ್ಲೇ ಇದೆ. ಹೀಗಿದ್ದರೂ, ಸಚಿವರು, ಜಾಗೆಯನ್ನು ಸರ್ಕಾರ ಸುಪರ್ದಿಗೆ ಪಡೆದಿದೆ ಎಂದು ಸದನದಲ್ಲಿ ಹೇಳಿ ಜನರನ್ನು ದಿಕ್ಕೂ ತಪ್ಪಿಸುತ್ತಿದ್ದಾರೆ. ಈ ಜಾಗೆಯನ್ನು ನಗರಸಭೆ ಅನುಮತಿ ಇಲ್ಲದೇ

    ಸರ್ಕಾರ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಆರೋಪಿಸಿದರು. 

    ಚುನಾವಣಾ ಪೂರ್ವದಲ್ಲಿ 250 ಮನೆಗಳನ್ನು ಎಚ್.ಕೆ. ಪಾಟೀಲ ಅವರು ವಿತರಿಸಿದರು. ಒಂದು ಸಭೆಯನ್ನು ಕರೆಯದೇ ಮನೆ ವಿತರಿಸಿ ಸರ್ವಾಧಿಕಾರಿ ವರ್ತೆನೆ ತೋರಿದರು. ಈಗ ನಗರಸಭೆ ಆಸ್ತಿ ವಿಷಯದಲ್ಲಿ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ಸ್ಥಳೀಯ ನಗರಸಭೆ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು, ಸಂಸದರನ್ನು ಪ್ರಾಧಿಕಾರ ಸಮಿತಿಯಲ್ಲಿ ಒಳಗೊಳಿಸದೇ ಸಮತಿ ರಚನೆ ಮಾಡಿದ್ದಾರೆ. ಈ ವಿಷಯ ವಿರುದ್ಧ ನಗರಸಭೆಯು ನ್ಯಾಯಾಂಗ ಮೊರೆ ಹೋಗುಲಿದೆ ಎಂದರು

    ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ಪ್ರಾಧಿಕಾರ ರಚನೆ, ಯೋಜನೆ ಮತ್ತು ಉದ್ದೇಶ ಹೊಂದುವ ಪೂರ್ವದಲ್ಲಿ ನಗರಸಭೆ ಸದಸ್ಯರ ಜತೆ ಚರ್ಚಿಸಲಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ನಡೆದಿಲ್ಲ. ಈ ಪ್ರಕ್ರಿಯೆ ಪ್ರಜಾಪ್ರಭುತ್ವಕ್ಕೆ ಅಪಮಾನ ಮತ್ತು ನಗರಸಭೆ ಅಸ್ತಿತ್ವಕ್ಕೆ ಧಕ್ಕೆ ಯಾಗಿದೆ. ಈ ಹಿನ್ನೆಲೆ ವಿಧೇಯಕವನ್ನು ನಗರಸಭೆ ಆಡಳಿತ ಸದಸ್ಯರು ವಿರೋಧಿಸಿ, ಖಂಡಿಸುತ್ತೇವೆ ಎಂದರು.

    ನಗರಸಭೆಗೆ ಆದಾಯ ತರುವ ಈ ಜಾಗೆಯನ್ನು ನಗರಸಭೆಯಿಂದಲೇ ಅಭಿವೃದ್ಧಿ ಪಡಿಸುತ್ತೇವೆ. ಪ್ರಾಧಿಕಾರ ರಚನಯಿಂದ ಲಭಿಸುವ ಆದಾಯವು ನೇರವಾಗಿ ಸರ್ಕಾರಕ್ಕೆ ಹೋಗುತ್ತದೆ. ಇದರಿಂದ ಸ್ಥಳೀಯ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಾಧಿಕಾರ ಲಾಭವನ್ನು ನಗರಸಭೆ ಪಡೆಯಲು ಸರ್ಕಾರಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿ ಪಡೆಯಬೇಕಾಗೂತ್ತದೆ. ಹೀಗಾಗಿ ನಗರವ್ಯಾಪ್ತಿ ಅಭಿವೃದ್ಧಿ ಅಸಾಧ್ಯ ಎಂದು ಅಬ್ಬಿಗೇರಿ ಹೇಳಿದರು.

    ರಾಘವೇಂದ್ರ ಯಳವತ್ತಿ ಮಾತನಾಡಿ, ಎಚ್.ಕೆ. ಪಾಟೀಲ ಅವರ ಪ್ರಾಧಿಕಾರ ರಚನೆಯಲ್ಲಿ ನಗರಸಭೆ ಅಭಿಪ್ರಾಯ ಕೇಳಿಲ್ಲ. ಒಟ್ಟಾರೆ ನಗರಸಭೆ ಆಸ್ತಿಮೇಲೆ ಎಚ್.ಕೆ. ಪಾಟೀಲರು ಹಕ್ಕು ಸಾಧಿಸಲು ಪ್ರಯತ್ನ ನಡೆಸಿದ್ದಾರೆ. ನಗರಸಭೆ ಆಡಳಿತ ದ ಮೇಲೆ ಜನರ ಅಪನಂಬಿಕೆ ಬರುವಂತೆ ಸಚಿವರು ನಡೆದುಕೊಳ್ಳುತ್ತಿದ್ದಾರೆ.

    ಮೂಲಭೂತ ಸೌಕರ್ಯ ನೀಡುವರು ಸ್ಥಳೀಯ ನಗರಸಭೆ  ಆಗಿದೆ. ಈ ಹಿನ್ನೆಲೆ ನಗರಸಭೆ ಆಸ್ತಿಯನ್ನು ನಗರಸಭೆಗೆ ಉಳಿಸಿಕೊಳ್ಳಲು ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಯಳವತ್ತಿ ಹೇಳಿದರು.

    ಸುನಂದಾ ಬಾಕಳೆ, ಅನಿತಾ ಗಡ್ಡಿ, ವಿಜಯಲಕ್ಷ್ಮಿ ದಿಂಡೂರು, ವಿದ್ಯಾವತಿ ಗಡಗಿ, ನಾಗರಾಜ ತಳವಾರ, ಮಾಧುಸ್ವಾಮಿ ಮೇರವಾಡೆ, ಮಹಾಂತೇಶ ನೆಲವಡಿ, ವಿನಾಯಕ ಮಾನ್ವಿ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts