More

    ಕಲಿಕೆಯಲ್ಲಿ ನಿಷ್ಠೆ, ಗುರು ಹಿರಿಯರಲ್ಲಿ ಗೌರವ ತೋರುವುದೇ ಶಿಕ್ಷಣ: ವಾಸಣ್ಣ ಕುರಡಗಿ

    ವಿಜಯವಾಣಿ ಸುದ್ದಿಜಾಲ ಗದಗ
    ದು:ಶ್ಚಟಗಳಿಗೆ ಮತ್ತು ದುರ್ಮಾರ್ಗಗಳಿಗೆ ಬಲಿಯಾಗದೇ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಶಿಕ್ಷಣವೆಂದರೆ ಬರಿ ಓದು ಬರಹದ ಮೂಲಕ ಜ್ಞಾನ ಗಳಿಸುವುದಷ್ಟೇ ಅಲ್ಲ, ಕಲಿಕೆಯಲ್ಲಿ ನಿಷ್ಠೆ ಇಟ್ಟುಕೊಂಡು ಅಚಲವಾದ ಗುರಿಯನ್ನು ತಲುಪುವುದು ಎಂದು ಮಾಜಿ ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿದರು.
    ನಗರದ ಕಲ್ಯಾಣಸಿರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಎನ್​.ಎಸ್​.ಎಸ್​. ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಕಲಿಕೆಗೆ ಆಸರೆಯಾಗಿರುವ ಗುರು ಹಿರಿಯರನ್ನು ಗೌರವದಿಂದ ಕಾಣುವಂತೆ ನಡೆದುಕೊಳ್ಳುವುದೇ ಶಿಕ್ಷಣ. ವಿದ್ಯಾಥಿರ್ಗಳು ಕಲಿಕಾ ನಿಷ್ಠೆ ವಿನಯಶೀಲ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮತ್ತು ದೇಶಕ್ಕೆ ಗೌರವವನ್ನು ತರಬೇಕು ಎಂದರು.
    ಜಿಲ್ಲಾ ಸಮಾಜಕ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ವರಗಪ್ಪನವರ ಮಾತನಾಡಿ, ಸಾಧನೆಯನ್ನು ಮಾಡಲು ಕಠಿಣ ಪರಿಶ್ರಮ ತುಂಬಾ ಅವಶ್ಯಕತೆಯಾಗಿದೆ. ವಿದ್ಯಾಥಿರ್ಗಳು ಕ್ಷಣಿಕವಾದ ಅಲ್ಪ ಹವ್ಯಾಸವನ್ನು ರೂಢಿಸಿಕೊಳ್ಳಬಾರದು. ವಿದ್ಯಾಥಿರ್ ಜೀವನವೆಂದರೆ ಅದೊಂದು ಸಾಧನೆಯ ಮಾರ್ಗವಾಗಿದ್ದು ತಪಸ್ಸಿನಂತೆ ಜ್ಞಾನಾರ್ಜನೆ, ಉನ್ನತ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಜನಮೆಚ್ಚುವ ರೀತಿ ವಿದ್ಯಾಥಿರ್ಗಳು ಉನ್ನತ ಮಟ್ಟಕ್ಕೇರಬೇಕು ಎಂದರು.
    ಅಧ್ಯತೆ ವಹಿಸಿ ಮಾತನಾಡಿದ ಪ್ರಾ. ಬಿ.ಬಿ.ಗೌಡರ, ಕಲ್ಯಾಣಸಿರಿ ಶಿಕ್ಷಣ ಸಂಸ್ಥೆಯಿಂದ 15ಕ್ಕೂ ಹೆಚ್ಚು ವಿದ್ಯಾಥಿರ್ಗಳು ವಿಶ್ವವಿದ್ಯಾಲಯ ಮಟ್ಟದ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಶೇ.95 ರಷ್ಟು ಲಿತಾಂಶ ಸಾಧಿಸಿ, ವಿದ್ಯಾಥಿರ್ಗಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳಸಿ ಉದ್ಯೋಗಿಗಳನ್ನಾಗಿಸಲು, ಉನ್ನತ ಸ್ಥಾನಗಳಿಗೆ ಮತ್ತು ವ್ಯಾಸಂಗಕ್ಕೆ ಅಣಿಗೊಳಿಸಲು ಈ ಶಿಣ ಸಂಸ್ಥೆ ಸಶಕ್ತವಾಗಿದೆ.
    ಕಾರ್ಯಕ್ರಮದಲ್ಲಿ 2022&23ನೇ ಸಾಲಿನಲ್ಲಿ ಅತೀಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾಥಿರ್ಗಳನ್ನು ಅತಿಥಿಅಭ್ಯಾಗತರಿಂದ ಸನ್ಮಾನಿಸಲಾಯಿತು.
    ಪ್ರೊ. ಬಿ. ಎಂ. ನದ್ದಿಮುಲ್ಲಾ, ಗೀತಾ ಸಂಗಮದವರ, ಪ್ರೊ. ವೈಶಾಲಿ ಉಮಚಗಿ, ಚಂದ್ರಕಾಂತ ದೊಡ್ಮನಿ, ಪ್ರೊ. ಮಾರುತಿ ಶಿರುಂದ, ಪ್ರೊ. ಶಶಿಕಲಾ ಉಮ್ಮಣ್ಣವರ, ಪ್ರೊ. ರೇಣುಕಾ ನವಲಗುಂದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts