More

    ಕೌಜಗೇರಿ ಗ್ರಾಮದೇವತೆ ದ್ಯಾಮವ್ಯ ತಾಯಿ ಜಾತ್ರಾ ಮಹೋತ್ಸವ

    ವಿಜಯವಾಣಿ ಸುದ್ದಿಜಾಲ ಗದಗ
    ಜಿಲ್ಲೆಯ ರೊಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಇತ್ತೀಚಿಗೆ ಗ್ರಾಮದೇವತೆ ದ್ಯಾಮವ್ಯ ತಾಯಿ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ದೇವಾಲಯದಲ್ಲಿ ಹೋಮ ಹವನ ಕಾರ್ಯಕ್ರಮ ನೆರವೇರಿತು.
    ಬೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಧರ್ಮ ಜಾತಿಗಳ ಭಿನ್ನಬೇಧವಿಲ್ಲದೆ ಗ್ರಾಮದೇವತೆ ಜಾತ್ರೆಯಲ್ಲಿ ಎಲ್ಲರೂ ಸೇರಿ ಒಂದೇ ಕಡೆಗೆ ಅಡುಗೆ ಮಾಡಿ 5 ದಿನಗಳ ಕಾಲ ಒಟ್ಟಿಗೆ ಸೇರಿ ಪ್ರಸಾದ ಸೇವಿಸುವ ಕಾರ್ಯಕ್ರಮ ಮಾದರಿಯವಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಡಾ. ಶಂಭು ಬಳಿಗಾರ ಮಾತನಾಡಿ, ಕೌಜಗೇರಿಯ ಜನತೆಯನ್ನು ನೋಡಿದರೇ ಜಾತ್ರಾ ಮಹೋತ್ಸವದಲ್ಲಿ ಭಕ್ತಿಸಾಗರವೇ ಹರಿದಿದೆ. ತಾವೆಲ್ಲರೂ ಭಕ್ತಿಯ ಗುಂಗಿನಲ್ಲಿ ತೇಲಾಡುತ್ತೀದಿರಿ ಎಂದು ಜಾನಪದ ಶೈಲಿಯಲ್ಲಿ ಹೇಳಿದರು.
    ಹನಮಂತಗೌಡ ಅಡೂರ ಅಧ್ಯತೆ ವಹಿಸಿದ್ದರು. ಎಮ್​. ಎಚ್​ ದ್ಯಾಪನಗೌಡ್ರ, ಸಂಗಮೇಶ ಹೊಂಬಳ, ಎಸ್​. ಬಿ ಶಿವಳ್ಳಿ, ಎನ್​.ಎಸ್​. ಹೊಸಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts