More

    ಅಂಜುಮನ್ ಇಸ್ಲಾಮ್ ಪಾಲಿಟೆಕ್ನಿಕ್ ಮಾದರಿ ಕಾಲೇಜ್ : ಡಾ.ನೂರಾನಿ


    ಗದಗ: ಗದುಗಿನ ಅಂಜುಮನ್ ಇಸ್ಲಾಮ್ ಶಿಕ್ಷಣ ಸಂಸ್ಥೆ (ಟ್ರಸ್ಟ)ಯ ಅಂಜುಮನ್ ಇಸ್ಲಾಮ್ ಪಾಲಿಟೆಕ್ನಿಕ್ ೧೯೮೩ರಲ್ಲಿ ಸ್ಥಾಪನೆಗೊಂಡು ನಿರಂತರ ಸೇವೆಯಿಂದಾಗಿ ರಾಜ್ಯದ ಪ್ರತಿಷ್ಠಿತ ಮಾದರಿ ಕಾಲೇಜ್ ಆಗಿದೆ ಎಂದು ಗದಗ ಐಎಂಎ ಮಾಜಿ ಅಧ್ಯಕ್ಷ ಹಿರಿಯ ವೈದ್ಯರಾದ ಡಾ.ಪ್ಯಾರಅಲಿ ನೂರಾನಿ ಅಭಿಪ್ರಾಯಪಟ್ಟರು.
    ಅಂಜುಮನ್ ಇಸ್ಲಾಮ್ ಪಾಲಿಟೆಕ್ನಿಕ್ ಕಾಲೇಜ್‌ದಲ್ಲಿ ನಿರಂತರ ೩೮ ವರ್ಷಗಳ ಸುಧೀರ್ಘ ಅವಧಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿ ಸೇವಾ ನಿವೃತ್ತರಾದ ಎ.ಐ.ನಾಯಕ ಅವರನ್ನು ಮಂಗಳವಾರ ಸನ್ಮಾನಿಸಿ ಮಾತನಾಡಿದರು.
    ಅಂದಿನ ದಿನಮಾನಗಳಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಏಕೈಕ ಕಾಲೇಜ್ ಇದಾಗಿತ್ತು ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗದಗ ತಾಲೂಕಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಕಾಲೇಜ್‌ದಲ್ಲಿ ತಾಂತ್ರಿಕ ಶಿಕ್ಷಣ ಪಡೆದು ಇಂದು ರಾಜ್ಯ ವಿವಿದೆಡೆ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.
    ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಎ.ಐ.ನಾಯಕ ಅವರು ನನಗೆ ಅಂಜುಮನ್ ಇಸ್ಲಾಮ್ ಶಿಕ್ಷಣ ಸಂಸ್ಥೆ ವೃತ್ತಿ ಜೀವನ ಆರಂಭಿಸಲು ಅವಕಾಶ ಕಲ್ಪಿಸಿದ್ದು, ಸಂಸ್ಥಾಪಕರು ಮತ್ತು ಆಡಳಿತ ಮಂಡಳಿಯವರು ನೀಡಿದ ಸಹಕಾರದಿಂದ ಕಾಲೇಜ್‌ನ್ನು ಉನ್ನತ ಹಂತಕ್ಕೆ ಮುನ್ನಡೆಸಿದ ಸಂತೃಪ್ತ ಭಾವನೆ ನನಗಿದೆ. ಇಲ್ಲಿ ನಾನು ಕಲಿಸಿದ್ದು ಮತ್ತು ಕಲಿತದ್ದು ಬಹಳಷ್ಟಿದೆ ಸಹಕಾರ ನೀಡಿದ ಎಲ್ಲರೂ ಸ್ಮರಣೀಯರು ಜೊತೆಗೆ ಇಲ್ಲಿ ಶಿಕ್ಷಣ ಪಡೆದವರು ಇಂದು ದೊಡ್ಡ ಸ್ಥಾನದಲ್ಲಿರುವದು ನನಗೆ ಸಂತೋಷವನ್ನುAಟು ಮಾಡಿದೆ ಎಂದರು.
    ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಮ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಜನಾಬ ಶಿರಾಜ್‌ಅಹ್ಮದ್ ಖಾಜಿ, ವಿದ್ಯಾದಾನ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಜಮಾಅತೆ ಇಸ್ಲಾಮಿ ಹಿಂದ್‌ನ ವಲಯ ಸಂಚಾಲಕರಾದ ಜನಾಬ ಕೆ.ಐ.ಶೇಖ ಸೇರಿದಂತೆ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts