More

    ಬೀದಿಬದಿ ವ್ಯಾಪಾರಸ್ಥರ ಬೇಡಿಕೆ ಈಡೇರಿಸಿ

    ವಿಜಯವಾಣಿ ಸುದ್ದಿಜಾಲ ಸವಣೂರ

    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಗುರುವಾರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರಗೆ ಮನವಿ ಸಲ್ಲಿಸಿದರು.

    ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಶುಕ್ರವಾರ ಪಟ್ಟಣದಲ್ಲಿ ಜರುಗುವ ಸಂತೆ ವ್ಯಾಪಾರಸ್ಥರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ಸಂತೆಯಲ್ಲಿ ಬೀದಿಯ ಸಣ್ಣ ವ್ಯಾಪಾರಸ್ಥರಿಂದ 10 ರೂ. ಹಾಗೂ ದೊಡ್ಡ ವ್ಯಾಪಾರಸ್ಥರಿಂದ 15 ರೂ. ಮಾತ್ರ ಕರ ವಸೂಲಿ ಮಾಡಬೇಕು. ಪ್ರತಿದಿನ ಡಬ್ಬಾ ಅಂಗಡಿಗೆ 10 ರೂ. ಕರ ವಸೂಲಿ ಮಾಡಬೇಕು. ಇಲ್ಲಿಗೆ ಬರುವ ಗ್ರಾಮೀಣ ಪ್ರದೇಶದ ವ್ಯಾಪಾರಸ್ಥರಿಂದ ಒತ್ತಾಯಪೂರ್ವಕವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈ ಕುರಿತು ತನಿಖೆ ಕೈಗೊಂಡು ರೈತರಿಗೆ ಒಂದು ದರ ನಿಗದಿ ಮಾಡಬೇಕು. ಸಂತೆಯಲ್ಲಿ ವಾಹನಗಳ ಓಡಾಟದಿಂದ ತೀವ್ರ ತೊಂದರೆ ಉಂಟಾಗುತ್ತಿದೆ. ವಾಹನಗಳಿಗೆ ಕಡಿವಾಣ ಹಾಕಬೇಕು. ಬಿಡಾಡಿ ದನಗಳನ್ನು ನಿಯಂತ್ರಿಸಬೇಕು. ಸಂತೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಾಂಕ್ರಾಮಿಕ ರೋಗಗಳ ತಡೆಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಮಿತಿ ಪದಾಧಿಕಾರಿಗಳಾದ ಚನ್ನಬಸಯ್ಯ ದುರ್ಗದಮಠ, ಉಳವೇಶ ನೀರಲಗಿ, ದಿವಾನಸಾಬ್ ನದಾಫ್, ನಾಗೇಶ ಪಾಟೀಲ, ಎಂ.ಎಫ್. ನದಾಫ್, ಈರಣ್ಣ ತೆಗ್ಗಿಹಳ್ಳಿ, ಕೇದಾರಪ್ಪ (ಜೋಗಿ) ಬಾಬನಿ, ಹೆಗ್ಗಪ್ಪ ಕಲಾಲ್, ಜಮೀರಅಹ್ಮದ್ ಮಲ್ಲೂರಿ, ನಾಗಪ್ಪ ಸಾತಪತಿ, ಕಲ್ಲಯ್ಯ ಮಠಪತಿ, ಶಿವಪುತ್ರಯ್ಯ ಕಲ್ಮಠ, ಲಕ್ಷ್ಮಣ ಜಾಧವ, ಮುಸ್ತಾಕಅಹ್ಮದ್ ಗುಲಸಂಗಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts