More

    ಉದ್ಯೋಗ, ಉಡುಗೊರೆ ನೆಪದಲ್ಲಿ 1.26 ಕೋಟಿ ರೂ. ವಂಚನೆ

    ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉದ್ಯೋಗ, ಉಡುಗೊರೆ ನೆಪ ಸೇರಿದಂತೆ ವಿವಿಧ ಆನ್‌ಲೈನ್ ವ್ಯವಹಾರ ನಡೆಸಿ ಒಟ್ಟು 6 ಪ್ರಕರಣದಲ್ಲಿ 1,26,50,234ರೂ. ವಂಚನೆಗೈದಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಪ್ರಕರಣ 1: ಮಾ.14ರಂದು ದೂರುದಾರರ ಮೊಬೈಲ್‌ಗೆ ಪಾರ್ಟ್ ಟೈಂ ಜಾಬ್ ನೆಪದಲ್ಲಿ ಸಂದೇಶ ಬಂದಿದೆ. ನಂತರ ಟೆಲಿಗ್ರಾಂ ಮೂಲಕ ಕೆಲಸದ ಬಗ್ಗೆ ದೂರುದಾರರಲ್ಲಿ ಚಾಟ್ ಮಾಡಿಕೊಂಡಿದ್ದು, ಬಳಿಕ ಟಾಸ್ಕ್ ನೆಪದಲ್ಲಿ ದೂರುದಾರರು ಹಾಗೂ ಅವರ ಸಂಬಂಧಿಕರ ವಿವಿಧ ಬ್ಯಾಂಕ್ ಖಾತೆಗಳಿಂದ 76,31,084 ರೂ. ವರ್ಗಾಯಿಸಿಕೊಂಡಿದ್ದಾರೆ.


    ಪ್ರಕರಣ 2: ೆ.10ರಂದು ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ಪಾರ್ಟ್ ಟೈಂ ಜಾಬ್ ಇರುವುದಾಗಿ ಸಂದೇಶ ಕಳುಹಿಸಿ ನಂತರ ವಾಟ್ಸಾಪ್‌ನಲ್ಲಿ ಲಿಂಕ್‌ವೊಂದನ್ನು ಕಳುಹಿಸಿದ್ದರು. ಬಳಿಕ ಆರೋಪಿ ವಿವಿಧ ಟಾಸ್ಕ್‌ಗಳನ್ನು ನೀಡಿ ದೂರುದಾರರ ವಿವಿಧ ಖಾತೆಗಳಿಂದ 14,67,194 ರೂ. ವರ್ಗಾಯಿಸಿಕೊಂಡಿದ್ದಾನೆ.
    ಪ್ರಕರಣ 3: ಮಾ.3ರಂದು ದೂರುದಾರರ ವಾಟ್ಸಪ್ ನಂಬರ್‌ಗೆ ಜಾಬ್ ಆರ್ ವಾಟ್ಸಪ್ ಮೆಸೇಜ್ ಬಂದಿದ್ದು, ಟೆಲಿಗ್ರಾಂ ಪ್ರೊೈಲ್‌ನಲ್ಲಿ ಚಾಟನ್ನು ಮುಂದುವರಿಸಿದ್ದಾನೆ. ಈ ಪ್ರಕರಣದಲ್ಲಿ ದೂರುದಾರರಿಂದ ಹಂತಹಂತವಾಗಿ 28,21,100ರೂ. ವರ್ಗಾಯಿಸಿಕೊಂಡಿದ್ದಾರೆ.


    ಪ್ರಕರಣ 4: ೆ.7ರಂದು ಅಪರಿಚಿತ ವ್ಯಕ್ತಿ ವಾಟ್ಸಪ್ ಸಂದೇಶ ಕಳುಹಿಸಿ ಉಡುಗೂರೆ ಕಳುಹಿಸುವುದಾಗಿ ತಿಳಿಸಿ ದೂರುದಾರರ ಹೆಸರು ವಿಳಾಸ ಪಡೆದುಕೊಂಡಿದ್ದಾರೆ. ನಂತರ ೆ.13ರಂದು ನಿಮಗೆ ಉಡುಗೂರೆ ಬಂದಿದೆ, ಅದಕ್ಕಾಗಿ ಶುಲ್ಕ ಪಾವತಿಸಬೇಕೆಂದು ತಿಳಿಸಿದ್ದಾರೆ. ಬಳಿಕ ಬ್ಯಾಂಕ್ ಯುಪಿಐ ಕೋಡ್ ಮುಖಾಂತರ ಹಂತಹಂತವಾಗಿ 82,746ರೂ. ಖಾತೆಗೆ ವರ್ಗಾಯಿಸಿದ್ದಾನೆ.


    ಪ್ರಕರಣ 5: ಏ.11ರಂದು ದೂರುದಾರರ ವಾಟ್ಸಾಪ್ ಖಾತೆಗೆ ಯಾವುದೋ ಅಪರಿಚಿತ ವ್ಯಕ್ತಿ ಮೊಬೈಲ್ ಸಂದೇಶ ಹಾಕಿ ಬಳಿಕ ಲಿಂಕ್ ಕಳುಹಿಸಿದ್ದಾನೆ. ಸದ್ರಿ ಸಂದೇಶವು ಗೂಗಲ್ಗೆ ಲಿಂಕ್ ಆಗಿದ್ದು, ಸದ್ರಿ ಅಪರಿಚಿತ ವ್ಯಕ್ತಿಯು ದೂರುದಾರರ ಮಗಳಿಗೆ ಟೆಲಿಗ್ರಾಂ ಆಪ್‌ನ್ನು ಡೌನ್‌ಲೋಡ್ ಮಾಡಲು ತಿಳಿಸಿದ್ದಾನೆ. ಅದರಂತೆ ಟೆಲಿಗ್ರಾಂ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಟಾಸ್ಕ್ ನೆಪದಲ್ಲಿ ಹಂತ ಹಂತವಾಗಿ 4,23,000 ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.


    ಪ್ರಕರಣ 6: ಏ.17ರಂದು ಬೆಳಗ್ಗೆ 11 ಗಂಟೆಗೆ ದೂರುದಾರರ ವಾಸದ ಮನೆಗೆ ಸ್ಕ್ರಾಚ್ ಕಾರ್ಡೊಂದು ಅಂಚೆ ಮೂಲಕ ಬಂದಿದ್ದು ದೂರುದಾರರು ಅದನ್ನು ತೆರೆದು ನೋಡಿ ಅದರಲ್ಲಿ ನಮೂದಾಗಿದ್ದ ವಾಟ್ಸಪ್ ನಂಬ್ರ 9123826674 ನೇ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ನೀವು ಮೀಶೊ ವತಿಯಿಂದ ಕಾರ್ ಗೆದ್ದಿದ್ದೀರಿ ಅದರ ಸ್ಕ್ರಾಚ್ ಕಾರ್ಡನ್ನು ಸ್ಕ್ಯಾಚ್ ಮಾಡಿ ಕೋಡನ್ನು ಹೇಳುವಂತೆ ಸೂಚಿಸಿದ್ದು ಅಂತೆಯೇ ದೂರುದಾರರು ಸದ್ರಿ ಕೋಡನ್ನು ಆತನಿಗೆ ನೀಡಿದ್ದು ನಂತರದಲ್ಲಿ ಸದ್ರಿ ವ್ಯಕ್ತಿಯು ವಾಟ್ಸಪ್ ನಂಬರ್‌ನಲ್ಲಿ ದೂರುದಾರರೊಂದಿಗೆ ಚಾಟ್ ಮಾಡಿಕೊಂಡಿದ್ದ. ಬಳಿಕ ವಿವಿಧ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 2,25,200ರೂ. ವರ್ಗಾಯಿಸಿಕೊಂಡಿದ್ದಾನೆ.


    ಈ ಎಲ್ಲ 6 ಪ್ರಕರಣಗಳು ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts