More

    ಮಹಾರಾಷ್ಟ್ರದಿಂದ ರಾಜ್ಯಕ್ಕೆ ನೀರು ಬಿಡುಗಡೆ

    ನಿಪ್ಪಾಣಿ: ತಾಲೂಕಿನ ವೇದಗಂಗಾ ನದಿ ಮೂಲಕ ನಿಪ್ಪಾಣಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜವಾಹರ ಜಲಾಶಯದ ನೀರಿನ ಪ್ರಮಾಣ ಕಡಿಮೆಯಾಗುತಿತ್ತು.

    ಬರದ ಪರಿಣಾಮವಾಗಿ ನಾಗರಿಕರಲ್ಲಿ ಆತಂಕದ ಛಾಯೆ ಮೂಡಿತ್ತು. ಆದರೆ ಶನಿವಾರ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ಚಿಖಲಿ ಬಾಂದಾರ ಮೂಲಕ ವೇದಗಂಗಾ ನದಿಗೆ 150 ಎಂಸಿಎ್ಟಿ ನೀರು ಬಿಡುಗಡೆ ಮಾಡಲಾಗಿದೆ.

    ಕಾಳಮ್ಮಾವಾಡಿ ಒಪ್ಪಂದದಂತೆ ಪ್ರತಿವರ್ಷ ಹಂತಹಂತವಾಗಿ ವೇದಗಂಗಾ ಹಾಗೂ ದೂಧಗಂಗಾ ನದಿಗೆ 4 ಟಿಎಂಸಿ ನೀರು ಹರಿಬಿಡಲಾಗುತ್ತದೆ. ಸ್ಥಳೀಯ ಜವಾಹರ ಜಲಾಶಯದ ಮಟ್ಟ 48 ಅಡಿಯಿದ್ದು, ಕೇವಲ 33 ಅಡಿ ನೀರಿದೆ. ನದಿಗೆ ನೀರು ಬಿಟ್ಟ ಪರಿಣಾಮ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. .29ರಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ರೈತರೊಂದಿಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಭೇಟಿಯಾಗಿ ಕಾಳಮ್ಮಾವಾಡಿ ಒಪ್ಪಂದದಂತೆ ನೀರು ಬಿಡುವಂತೆ ಮನವಿ ಮಾಡಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts