More

    ಮಕ್ಕಳಿಂದ ಮಂಗನ ಅಂತ್ಯಕ್ರಿಯೆ

    ಉಳ್ಳಾಗಡ್ಡಿ-ಖಾನಾಪುರ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮೃತಪಟ್ಟ ಮಂಗನನ್ನು ಗೋಟೂರ ಗ್ರಾಮದ ಮಕ್ಕಳು ಗ್ರಾಮದಲ್ಲಿ ವಿಧಿ-ವಿಧಾನದ ಮೂಲಕ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮಂಗಗಳಿಗೆ ಗ್ರಾಮೀಣ ಭಾಗದಲ್ಲಿ ವಿಧಿವತ್ತಾಗಿ ಅಂತ್ಯಕ್ರಿಯೆ ಮಾಡುವ ವಾಡಿಕೆ ಇದೆ.

    ಅದರಂತೆ ಮಕ್ಕಳು ಮಂಗನ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿ, ದಾರಿಹೋಕರು ನೀಡಿದ ಕಾಣಿಕೆಯಿಂದ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ಮೃತ ಮಂಗನನ್ನು ಶೃಂಗರಿಸಿ, ಗುಲಾಲ ಹಾಕಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮಕ್ಕಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಟ್ಟಮಕ್ಕಳು, ಹೆದರದೇ ಮಂಗನ ಶವಸಂಸ್ಕಾರ ಮಾಡಿದ್ದಾರೆ.

    ಕರೊನಾ ಸಂದಿಗ್ಧ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಾಣಿಗಳ ರಕ್ಷಣೆ ಹಾಗೂ ಅವುಗಳ ಆರೈಕೆ ಮಕ್ಕಳಿಂದ ನಡೆಯುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts