More

    ಶುಕ್ರವಾರ, ಶನಿವಾರ ರೆಡ್ ಅಲರ್ಟ್ – ಭಾರಿ ಮಳೆ ಸಾಧ್ಯತೆ

    ಮಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಮುಂಗಾರು ಮತ್ತೆ ಚುರುಕುಗೊಂಡಿದೆ. ಮಧ್ಯಾಹ್ನವರೆಗೆ ಸಾಮಾನ್ಯವಾಗಿ ಸುರಿದ ಮಳೆ ನಂತರ ತೀವ್ರತೆ ಹೆಚ್ಚಿಸಿ, ನಿರಂತರವಾಗಿ ಸುರಿದಿದೆ. ಶುಕ್ರವಾರ ಮತ್ತು ಶನಿವಾರವೂ ಕರಾವಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ವ್ಯಾಪಕವಾಗಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರ ಪ್ರಕ್ಷುಬ್ಧ ಹಾಗೂ ಗಾಳಿ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.

    ಗ್ರಾಮೀಣ, ಘಟ್ಟದ ತಪ್ಪಲಿನ ಭಾಗದಲ್ಲೂ ಮಳೆ ಬಿರುಸಾಗಿದೆ. ಗುರುವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ 29.5 ಮಿ.ಮೀ, ಬಂಟ್ವಾಳ 7.7, ಮಂಗಳೂರು 5.8, ಪುತ್ತೂರು 11.6, ಸುಳ್ಯ 57.1ಮಿ.ಮೀ., ಮೂಡುಬಿದಿರೆ 19.3 ಮತ್ತು ಕಡಬದಲ್ಲಿ 59.3 ಮಿ.ಮೀ. ಸಹಿತ ಸರಾಸರಿ 30 ಮಿ.ಮೀ. ಮಳೆಯಾಗಿದೆ.

    ಮಳೆ ಹಾನಿ: ಜಿಲ್ಲೆಯಲ್ಲಿ 3 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 7 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 34 ವಿದ್ಯುತ್ ಕಂಬಗಳು, 2 ಟ್ರಾನ್ಸ್‌ಫಾರ್ಮರ್, 1.68 ಕಿ.ಮೀ ನಷ್ಟು ವಿದ್ಯುತ್ ಮಾರ್ಗ (ತಂತಿ)ಕ್ಕೆ ಹಾನಿಯಾಗಿದೆ.


    ಕಾಳಜಿ ಕೇಂದ್ರದಲ್ಲಿ 58 ಮಂದಿ: ಕಡಬ ಹಾಗೂ ಸುಳ್ಯ ತಾಲೂಕಿಗೆ ಸಂಬಂಧಿಸಿದಂತೆ ವಿವಿಧ ಕಾಳಜಿ ಕೇಂದ್ರಗಳಲ್ಲಿ ಒಟ್ಟು 58 ಮಂದಿ ಆಶ್ರಯ ಪಡೆದಿದ್ದಾರೆ. ಕಲ್ಮಕಾರು ಸರ್ಕಾರಿ ಶಾಲೆಯಲ್ಲಿ 10 ಪುರುಷರು, 11 ಮಂದಿ ಮಹಿಳೆಯರು, ಸಂಪಾಜೆಯ ಸಜ್ಜನ ಪ್ರತಿಷ್ಠಾನದಲ್ಲಿ 8 ಪುರುಷರು ಮತ್ತು 4 ಮಂದಿ ಮಹಿಳೆಯರು, ಸುಬ್ರಹ್ಮಣ್ಯದ ಅನಘ ವಸತಿ ಗೃಹದಲ್ಲಿ 6 ಪುರುಷರು, 7 ಮಂದಿ ಮಹಿಳೆಯರು ಮತ್ತು 6 ಮಕ್ಕಳಿದ್ದಾರೆ. ಯೇನೆಕಲ್ಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓರ್ವ ಪುರುಷ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಆಶ್ರಯ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts